Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು ಯುವ ಬಂಟರ ಸಂಘ: ಅ.24ರಂದು ಪ್ರಶಸ್ತಿ ಪ್ರದಾನ, ಪ್ರೋತ್ಸಾಹ ಧನ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ವಿದ್ಯಾ ದೀವಿಗೆ ಯೋಜನೆಯಡಿ ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ 95 ಶೇಕಡಕ್ಕಿಂತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಯುವ ಸಾಧಕರಿಗೆ ಸನ್ಮಾನ, ದಿ| ಡಾ. ಮಧುಕರ ಶೆಟ್ಟಿ ಐ.ಪಿ.ಎಸ್‌ ಸಂಸ್ಕರಣಾ ಪ್ರಶಸ್ತಿ -2025, ದಿ. ಡಾ. ಗೋಪಾಲ ಕೃಷ್ಣ ಶೆಟ್ಟಿ ಸಂಸ್ಕರಣಾ ಪ್ರಗತಿಪರ ಕೃಷಿಕ ಪ್ರಶಸ್ತಿ, ಹಿರಿಯ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಅಗಸ್ಟ್‌ 24ರ ಭಾನುವಾರ ಬೆಳಿಗ್ಗೆ ಇಲ್ಲಿನ ಆರ್‌. ಎನ್‌.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್‌ ಶೆಟ್ಟಿ ಬಸ್ರೂರು ವಹಿಸಲಿದ್ದಾರೆ. ದುಬೈ ಫಾರ್ಚ್ಯುನ್‌ ಗ್ರೂಫ್‌ ಆಫ್‌ ಹೋಟೇಲ್ಸ್‌ ಸಿಎಂಡಿ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಘಟಪ್ರಭಾ ಮನೀಷ್‌ ಗ್ರೂಫ್‌ ಆಫ್‌ ಹೋಟೇಲ್ಸ್‌ ಮತ್ತು ಜೆಎನ್‌ಎಸ್‌ ಕನ್‌ಸ್ಟ್ರಕ್ಷನ್‌ ಸಿಎಂಡಿ ಜಯಶೀಲ್‌ ಶೆಟ್ಟಿ ಕಾಲ್ತೋಡು ದೀಪ ಪ್ರಜ್ವಲನ ಮಾಡಲಿದ್ದಾರೆ.

ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಡೆಪ್ಯೂಟಿ ರಿಜಿಸ್ಟಾರ್‌ ಬಿ. ವಸಂತ ಶೆಟ್ಟಿ ಅವರು ಅಭಿನಂದನಾ ನುಡಿಗಳನಾಡಲಿದ್ದಾರೆ. ಕುಂದಾಪು ತಾಲೂಕು ಸಮಿತಿ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಕಾವ್ರಾಡಿ ಸಂಪತ್‌ ಕುಮಾರ್‌ ಶೆಟ್ಟಿ ಶುಭಾಸಂಸನೆ ಗೈಯಲಿದ್ದಾರೆ.

ಮುಂಬೈ ಹೇರಂಭ ಆಗ್ರೋ ಇಂಡಸ್ಟ್ರೀಸ್‌ ಸಿಎಂಡಿ ಡಾ. ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಸಂಸ್ಕರಣಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಹಾಗೂ ಚಿಕ್ಕಮಗಳೂರು ಲೈಫ್‌ ಲೈನ್‌ ಪೀಡ್ಸ್‌ ಪ್ರೈ.ಲಿ. ಸಿಎಂಡಿ ಕಿಶೋರ ಕುಮಾರ್‌ ಹೆಗ್ಡೆ ಕೈಲ್ಕೇರಿ ಅವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ  ಸರಕಾರದ ಸರ್ವೊತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಅರುಣ ಕುಮಾರ್‌ ಶೆಟ್ಟಿ ಕರ್ಕಿಯವರಿಗೆ ಅಭಿನಂದನ ಕಾರ್ಯಕ್ರಮ  ನಡೆಯಲಿದೆ.

ಅಮೇರಿಕಾ ನಾರ್ತ್ ಬಂಟರ ಸಂಘದ ಅಧ್ಯಕ್ಷ ಗುಳ್ಳಾಡಿ ಮಂಜುನಾಥ ಶೆಟ್ಟಿ, ಚಿಕ್ಕಮಗಳೂರು ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ಶೆಟ್ಟಿ, ಭದ್ರಾವತಿ ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಕುಂದಾಪುರ ಹಿರಿಯ ವಕೀಲ ಟಿ.ಬಿ. ಶೆಟ್ಟಿ, ಬೆಂಗಳೂರು ಮಲ್ಟಿ ಪ್ರೋಯಿ ಇಂಡಿಯ ಉದ್ಯಮಿ ಧೀರಜ್ ಕುಮಾರ್ ಶೆಟ್ಟಿ, ಜನ್ಮಾಡಿ ಫೆವರೇಟ್ ಕ್ಯಾಶ್ ಇಂಡಸ್ಟ್ರೀಸ್ ಉದ್ಯಮಿ ಶಂಕರ ಹೆಗ್ಡೆ, ಹೇರಂಜಾಲು ಶ್ರೀ ಗುಡೆ ಮಹಾಲಿಂಗೇಶ್ವರ ಹೂಮ್ ಪೈಪ್ ಉದ್ಯಮಿ ಜಯಶೀಲ ಶೆಟ್ಟಿ, ಹುಬ್ಬಳ್ಳಿ ಕುಡ್ಲ ಉದ್ಯಮಿ ಸತೀಶ ಡಿ. ಶೆಟ್ಟಿ, ಬಂಟಕೋಡು ಶಕೀಲಾ ಸುಕುಮಾರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಮತ್ತು ದಶಮ ಸಂಭ್ರಮದ ಎಲ್ಲಾ ಮಹಾಪೋಷಕರು ಹಾಗೂ ಪೋಷಕರ ಉಪಸ್ಥಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು  ಸಂಘದ ಗೌರವಾಧ್ಯಕ್ಷರಾದ ಬಿ. ವತ್ಸಲಾ ದಯನಂದ ಶೆಟ್ಟಿ, ಸ್ಥಾಪಕಾಧ್ಯಕ್ಷರಾದ ಡಾ. ಅಂಪಾರು ನಿತ್ಯಾ ನಂದ ಶೆಟ್ಟಿ, ಅಧ್ಯಕ್ಷರಾದ ನಿತೀಶ್‌ ಶೆಟ್ಟಿ ಬಸ್ರೂರು, ಪ್ರಧಾನ ಕಾರ್ಯದರ್ಶಿ ಮುರುಳಿಧರ ಶೆಟ್ಟಿ, ಕಾರ್ಯಕ್ರಮದ ಸಂಚಾಲಕರಾದ ಸಚಿನ್‌ ಕುಮಾರ್‌ ಶೆಟ್ಟಿ ಹುಂಚನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version