ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಭೆ ನಿಮ್ಮದು ವೇದಿಕೆ ನಮ್ಮದು 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸತತ 110ನೇ ತಿಂಗಳ ಕಾರ್ಯಕ್ರಮ ಹಾಗೂ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ನೇತಾಜಿ ಕಮಿಟಿ ಫ್ರೆಂಡ್ಸ್ ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ವೇದಿಕೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಕುದ್ರಿನ ಮುಖ್ಯೋಪಾಧ್ಯಾಯ ರಾಘವೇಂದ್ರ, ಅಂಗನವಾಡಿ ಉಪಾಧ್ಯಾಯಿನಿಯರಾದ ಪ್ರೇಮಲತಾ ಗಣೇಶ್ ಸೇರುಗಾರ, ಸಂಗೀತಾ, ಲಲಿತಾ, ಆಶಾ ಕಾರ್ಯಕರ್ತೆಯರಾದ ಜ್ಯೋತಿ ಪೂಜಾರಿ, ಸಂಗೀತಾ, ನೇತಾಜಿ ಕಮಿಟಿ ಫ್ರೆಂಡ್ಸ್‌ನ ಅಧ್ಯಕ್ಷ ರಾಘವೇಂದ್ರ ಪೈ, ನಾಗಶ್ರೀ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು.

ರಾಘವೇಂದ್ರ ಪೈ ಅವರನ್ನು ಗೊಂಬೆಯಾಟ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ನೇತಾಜಿ ಕಮಿಟಿ ಫ್ರೆಂಡ್ಸ್‌ನ ವತಿಯಿಂದ ಕ್ರೀಡಾಪಟು ನಾಗಶ್ರೀ ಗಣೇಶ ಸೇರುಗಾರ್ ಅವರನ್ನು ಗೌರವಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸ್ಥಳೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ರಾಜೇಂದ್ರ ಪೈ ಅವರು ಕಾರ್ಯಕ್ರಮ ನಿರೂಪಿಸಿದರು.