Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕೆಜಿಎಫ್ ಸಿನಿಮಾ ಖ್ಯಾತಿಯ ನಟ ದಿನೇಶ್‌ ಮಂಗಳೂರು ನಿಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಆ ದಿನಗಳು, ಕೆಜಿಎಫ್, ಉಳಿದವರು ಕಂಡಂತೆ, ಕಿಚ್ಚ, ಕಿರಿಕ್ ಪಾರ್ಟಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ನಟ, ನಿರ್ದೇಶಕ ದಿನೇಶ್ (52) ಮಂಗಳೂರು ಇನ್ನಿಲ್ಲ. ಅವರು ಸೋಮವಾರದಂದು ಕುಂದಾಪುರ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆಲ ದಿನಗಳ ಹಿಂದೆ ಅವರಿಗೆ ಸ್ಟೋಕ್ ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಊರಿಗೆ ಮರಳಿದ್ದರು. ಮತ್ತೆ ಅಸ್ವಸ್ಥಗೊಂಡು ಕೋಟೇಶ್ವರದ ಸರ್ಜನ್‌ ಆಸ್ಪತ್ರೆಗೆ ದಾಖಲಾಗಿದ್ದರು.

ದಿನೇಶ ಮಂಗಳೂರು ಅವರು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಪ್ರತಿಭಾನ್ವಿತ ಪೋಷಕ ನಟರಾಗಿ ಗುರುತಿಸಿಕೊಂಡಿದ್ದರು. ಬಹುಬೇಡಿಕೆಯನ್ನು ಪಡೆದುಕೊಂಡಿದ್ದರು. ಎಲ್ಲ ರೀತಿಯ ಪೋಷಕ ಪಾತ್ರಗಳಲ್ಲೂ ನೈಜ ಅಭಿನಯ ನೀಡಿ ಗಮನಸಳೆಯುತ್ತಿದ್ದರು. ಪ್ರಸ್ತುತ ಅವರು ಬಹುನಿರೀಕ್ಷಿತ ಕಾಂತಾರ-1 ಸಿನಿಮಾದಲ್ಲಿ ನಟಿಸುತ್ತಿದ್ದರು.

Exit mobile version