ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ವ್ಯಕ್ತಿಗಳು ಪುನಃ ಪುನಃ ಪರೀಕ್ಷೆಯಲ್ಲಿ ವಿಫಲರಾದಾಗ, ಜೀವನದಲ್ಲಿ ಸೋತಾಗ ಮಾನಸಿಕ ಸ್ಥೈರ್ಯ ತುಂಬುವಲ್ಲಿ ಭಗವದ್ಗೀತೆಯಲ್ಲಿ ಹೇಳಿದ ವಾಸ್ತವಿಕ ಮೌಲ್ಯಗಳು ಸಹಕಾರಿ. ಹಾಗೆಯೇ ಮಹಾಭಾರತ ಮತ್ತು ರಾಮಾಯಣದಲ್ಲಾದ ಉತ್ತಮ ವಿಚಾರಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ ಎನ್ಆರ್ ದಾಮೋದರ್ ಶರ್ಮಾ ತಿಳಿಸಿದರು.
ಅವರು ಕುಂದಾಪುರದ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಸ್ಕ್ರತ ಆಯೋಜಿಸಿದ ‘ಸಂಸ್ಕ್ರತೋತ್ಸವ – ಶ್ರಾವಣೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ರವಿ ಉಪಾಧ್ಯರವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಥಮ ಪಿ.ಯು.ಸಿ ಯ ವರೇಣ್ಯ ಶರ್ಮಾ ವೇದಘೋಷ ಮೊಳಗಿಸಿದರು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಗಾರ್ಗಿದೇವಿ ಭರತನಾಟ್ಯ ಪ್ರದರ್ಶನ ನೀಡಿದರು.
ಧನ್ವಿ ಶೆಟ್ಟಿ ಮತ್ತು ತಂಡ ಪ್ರಾರ್ಥನೆ ಹಾಡಿದರು. ದ್ವಿತೀಯ ಪಿ.ಯು.ಸಿ ತರಗತಿಯ ಪೂರ್ವಿತಾ ಧನ್ಯವಾದ ಸಲ್ಲಿಸಿದರು. ದ್ವಿತೀಯ ಪಿ.ಯು.ಸಿ ಯ ಅಕ್ಷಯಾ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

