Site icon Kundapra.com ಕುಂದಾಪ್ರ ಡಾಟ್ ಕಾಂ

ಡಿ. 11: ಕ್ಯಾರಿಕೇಚರ್ ಮುಖೇನ ಸರಕಾರಿ ಶಾಲೆಗೆ ನಿಧಿ ಸಂಗ್ರಹ

ಕುಂದಾಪುರ: ಡಿ.10 ರಿಂದ 13ವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಜರುಗುವ ಕಾರ್ಟೂನ್ ಹಬ್ಬದಲ್ಲಿ ಡಿ.11ರಂದ ರೋಟರಿ ಕ್ಲಬ್ ಕುಂದಾಪುರ ಸಹಭಾಗಿತ್ವದಲ್ಲಿ ಚಿತ್ರನಿಧಿ-ಕ್ಯಾರಿಕೇಚರ್ ಬಿಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಲೈವ್ ಕ್ಯಾರಿಕೇಚರ್‌ನಿಂದ ಬರುವ ಹಣವನ್ನು ವಂಡ್ಸೆ ಸರಕಾರಿ ಶಾಲೆಗೆ ದೇಣಿಗೆಯಾಗಿ ನೀಡಲು ನಿರ್ಧರಿಸಲಾಗಿದೆ.

ಡಿ.11ರ ಶುಕ್ರವಾರ ಮಧ್ಯಾಹ್ನ 3ಗಂಟೆಯ ಡಾ. ರಂಜನ್ ಶೆಟ್ಟಿ ಚಿತ್ರನಿಧಿಯನ್ನು ಉದ್ಘಾಟಿಸಲಿದ್ದು, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರಿಂದಲೇ ಕ್ಯಾರಿಕೇಚರ್ ಬಿಡಿಸಿಕೊಳ್ಳುವ ಸುವರ್ಣಾವಕಾಶವಿದೆ. ಕಾರ್ಟೂನ್ ಪ್ರೀಯರು ಕೂಪನ್‌ಗಳಿಗಾಗಿ ರೋಟರಿ ಅಧ್ಯಕ್ಷ ಪ್ರಶಾಶ್ಚಂದ್ರ ಶೆಟ್ಟಿ (9845766055)ಅವರನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

Exit mobile version