Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರದ ಸಮುದ್ರ ಕಿನಾರೆಯಲ್ಲಿ ಮೂಡಿದ ಗಣಪನ ಮರಳು ಶಿಲ್ಪಾಕೃತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದು, ಗಣಪತಿಯ ಭಕ್ತವರ್ಗದಲ್ಲಿ ಸಂಭ್ರಮ ಮನೆಮಾಡಿದೆ. ಈ ನಡುವೆ ಉಡುಪಿಯ ’ಸ್ಯಾಂಡ್ ಥೀಂʼ ಕಲಾವಿದರ ತಂಡವೊಂದು ಕೋಟೇಶ್ವರದ ಅಳೆಅಳಿವೆ ಕಡಲತೀರದಲ್ಲಿ ’ಜೈ ಗಣೇಶ’ ಎಂಬ ಶೀರ್ಷಿಕೆಯೊಂದಿಗೆ ಮರಳು ಶಿಲ್ಪಾಕೃತಿಯನ್ನು ರಚಿಸಿದೆ.

ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಅವರುಗಳು ಮರಳುಶಿಲ್ಪವನ್ನು ರಚಿಸಿದ್ದಾರೆ. ಗಣೇಶ ಚತುರ್ಥಿಯ ಅಂಗವಾಗಿ ’ಜೈ ಗಣೇಶ’ ಎಂಬ ಶೀರ್ಷಿಕೆಯೊಂದಿಗೆ 4 ಅಡಿ ಮತ್ತು 6 ಅಡಿ ಎತ್ತರ ಅಗಲಗಳುಳ್ಳ ಕಲಾಕೃತಿಯನ್ನು ರಚಿಸಲಾಗಿದ್ದು, ಆಕರ್ಷಕವಾಗಿ ಮೂಡಿಬಂದಿದೆ.

Exit mobile version