ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಪ್ರಯುಕ್ತ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಕನ್ನಡ ಮತ್ತು ದೈಹಿಕ ಶಿಕ್ಷಣ ವಿಭಾಗ ಹಾಗೂ ಕುಂದಗನ್ನಡ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ನಡೆದ “ಚೆನ್ನಿಮಣಿ – 2025 – ಎಲ್ಲಾ ಒಂದು ಗಳ್ಗಿ ಬನ್ನಿ” ಎಂಬ ಕುಂದಗನ್ನಡ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ರಶಿತಾ, ತೃತೀಯ ಬಿಸಿಎ, ಕುಂದಗನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಅಕ್ಷತಾ, ದ್ವಿತೀಯ ಬಿಸಿಎ, ಕುಂದಗನ್ನಡ ಪದ ಬಳಕೆ ಸ್ಪರ್ಧೆಯಲ್ಲಿ ದ್ವಿತೀಯ, ವೈಭವಿ, ತೃತೀಯ ಬಿಸಿಎ, ಒಂಟಿ ಕಾಲಿನ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಹಾಗು ಲಗೋರಿ ಸ್ಪರ್ಧೆಯಲ್ಲಿ ಪ್ರಥಮ ಬಿಕಾಂನ ವಿದ್ಯಾರ್ಥಿಗಳಾದ ಆಕಾಶ್ ಹೆಚ್ ಯು, ಪ್ರೀತಮ್, ಮಂಜು, ಗೌತಮ್, ಸಚಿನ್, ವೈಭವ್ ಮತ್ತು ಕಾರ್ತಿಕ್ ಅವರು ದ್ವಿತೀಯ ಬಹುಮಾನ ಪಡೆದಿದ್ದಾರೆ.
ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್, ಸಾಹಿತ್ಯ ವೇದಿಕೆಯ ಸಂಯೋಜಕರಾದ ಭಾರತಿ ಗಾಣಿಗ, ರಾಜೇಶ್ವರಿ ಆರ್. ಶೆಟ್ಟಿ, ರೇವತಿ, ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿಗಳು ಶುಭಕೋರಿದ್ದಾರೆ.

