ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಂಗಳೂರಿನಲ್ಲಿ ಗುರುವಾರ ನಡೆದಿದೆ.
ಮೃತ ಯುವಕನನ್ನು ಹಂಗಳೂರು ಗ್ರಾಮದ ಶ್ರೀಧರ ಎಂಬವರ ಮಗ ಶ್ರೀಷ (28) ಎಂದು ಗುರುತಿಸಲಾಗಿದೆ.
ಈತ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಹಟ್ಟಿಯಂಗಡಿ ಸಿದ್ದಿವಿನಾಯಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸುತ್ತಿದ್ದು ಒಂದು ವರ್ಷದ ಹಿಂದೆ ಶಾಸ್ರ್ತಿ ಪಾರ್ಕ್ ಸಮೀಪ ಪ್ಲೈ ಒವರ್ ಮೇಲಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕೆಳಗೆ ಹಾರಿ ಕೈಕಾಲು ಪೆಟ್ಟಾಗಿದ್ದು ಚಿಕಿತ್ಸೆ ಕೊಡಿಸಿ ಗುಣಮುಖವಾಗಿದ್ದಾರೆ.
ಗುರುವಾರದಂದು ವಿಪರೀತ ಮಳೆ ಕಾರಣ ಶಾಲಾ ಕಾಲೇಜು ರಜೆ ಇರುವುದರಿಂದ ಮನೆಯಲ್ಲಿಯೇ ಇದ್ದು ಮಧ್ಯಾಹ್ನ ಊಟ ಬಡಿಸಲು ಕರೆದಾಗ ಏಲ್ಲಿಯೋ ಕಾಣದೇ ಇದ್ದು ಮನೆಯ ಬಾವಿ ನೋಡಿದಾಗ ಬಾವಿಯಲ್ಲಿ ಬಿದ್ದಿದ್ದು ಕೂಡಲೇ ತಂದೆ ಬೇಕರಿಯಿಂದ ಮನೆಗೆ ಹೋಗಿ ಮಗನನ್ನು ಮೇಲೆತ್ತಿದ್ದಾಗ ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

