Site icon Kundapra.com ಕುಂದಾಪ್ರ ಡಾಟ್ ಕಾಂ

ಬಿಜೂರು ಗ್ರಾಮದಲ್ಲಿ ಚಿರತೆ ಸಂಚಾರ ಸೆರೆ ಹಿಡಿಯಲು ವಾರದ ಗಡುವು: ಪ್ರತಿಭಟನೆ ಎಚ್ಚರಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ನಡೆಸುತ್ತಿದ್ದರು ಕೂಡಾ ಚಿರತೆ ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಗುರುವಾರದಂದು ಗ್ರಾಮ ಪಂಚಾಯತ್ ಗೆ ತೆರಳಿ ಅಂತಿಮವಾಗಿ ಒಂದು ವಾರದ ಗಡುವು ನೀಡಿದರು.

ಅಭಿವೃದ್ಧಿ ಅಧಿಕಾರಿ ಗೀತಾ ಅವರಿಗೆ ಮನವಿ ಸಲ್ಲಿಸಿ ಬಿಜೂರು ಗ್ರಾಮದ 2ನೇ ವಾರ್ಡನ ನಾರಂಬಳ್ಳಿ, ಬಾರ್ತಿಮಕ್ಕಿ, ಸಣ್ಣ ನಾರಂಬಳ್ಳಿ ಕಂಚಿಕಾನ್ ಕೋಟ್ನಾಡಿ ಕೋಡಿಕೇರಿ, ಕೋಣೂರು ಪ್ರದೇಶದಲ್ಲಿ ಹಲವು ತಿಂಗಳುಗಳಿಂದ ಚಿರತೆ ಸಂಚರಿಸುತ್ತಿದ್ದು ಗ್ರಾಮಸ್ಥರು ಭಯ ಭೀತಿ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆಯಂಗಳಕ್ಕೆ ಚಿರತೆ ಬಂದು ನಾಯಿ, ಕೋಳಿಗಳು ಆಹುತಿ ತೆಗೆದುಕೊಳ್ಳುತ್ತಿದ್ದರು ಸಂಬಂಧಪಟ್ಟ ಇಲಾಖೆಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗಂಡಿಲ್ಲ ಇದೀಗ ವಾರದ ಗಡುವು ನೀಡುತ್ತಿದ್ದೇವೆ ಈ ಸಮಯದಲ್ಲಿ ಚಿರತೆ ಹಿಡಿಯಲು ಸಾಧ್ಯವಾಗದಿದ್ದರೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಮನವಿ ಸ್ವೀಕರಿಸಿದ ಅಭಿವೃದ್ಧಿ ಅಧಿಕಾರಿ ಗೀತಾ ಸಂಬಂಧಪಟ್ಟ ಇಲಾಖೆಗೆ ಹಲವು ಭಾರೀ ಮಾಹಿತಿ ನೀಡಲಾಗಿದೆ. ಸಮಸ್ಯೆಯ ಗಂಭೀರತೆ ಕುರಿತು ಮನವರಿಕೆ ಮಾಡಲಾಗುವುದು ಎಂದರು.

ಅರಣ್ಯ ಇಲಾಖೆಯವರು ಹಾಗೂ ಶಾಸಕರು ಒಂದು ವಾರದಲ್ಲಿ ಚಿರತೆ ಹಿಡಿಯುವ ಕುರಿತು ಭರವಸೆ ನೀಡಿದ್ದಾರೆ ಆದರಿಂದ ಪ್ರತಿಭಟನೆಯನ್ನು ಕೈಬಿಟ್ಟು ಮನವಿ ಸಲ್ಲಿಸಿದ್ದೇವೆ ಶಾಸಕರು, ಇಲಾಖೆಯವರು ಮಾತಿಗೆ ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು .

Exit mobile version