Kundapra.com ಕುಂದಾಪ್ರ ಡಾಟ್ ಕಾಂ

ಹಕ್ಲಾಡಿ ಸರಕಾರಿ ಪ್ರೌಢಶಾಲೆ: ಸುವರ್ಣ ಮಹೋತ್ಸವಕ್ಕೆ ಚಾಲನೆ

ಕುಂದಾಪುರ: ತಾಲೂಕಿನ ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಬಿ. ಚಂದ್ರಲೇಖಾ ಜೆ.ಹೆಗ್ಡೆ ಚಾಲನೆ ನೀಡಿದರು. ರಘುನಾಥ ಶೆಟ್ಟಿ ಹೊಳ್ಮಗೆ ಧ್ವಜಾರೋಹಣ ನೆರವೇರಿಸಿದರು. ಆನಗಳ್ಳಿ ನರಸಿಂಹ ಶೆಟ್ಟಿ ಬಾಳೆಮನೆ ನೂತನ ಮುಖಮಂಟಪ ಉದ್ಘಾಟಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಳೆಮನೆ ಸಂತೋಷಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಓಎನ್‌ಜಿಸಿ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ನಾರಾಯಣ ನಾಯ್ಕ್, ಉದ್ಯಮಿ ಚಂದ್ರಶೇಖರ ಶೆಟ್ಟಿ, ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಳದ ಧರ್ಮದರ್ಶಿ ಅರುಣಕುಮಾರ್ ಶೆಟ್ಟಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ದೇವಾಡಿಗ, ಮಾಣೀಕೊಳಲು ಲಕ್ಷ್ಮೀನಾರಾಯಣ ಹೆಬ್ಬಾರ್, ನಿವೃತ್ತ ಆರೋಗ್ಯಾಧಿಕಾರಿ ಎಚ್.ಮಹಾಬಲ ಶೆಟ್ಟಿ, ಉದ್ಯಮಿ ಚತ್ತರಂಜನ್ ಹೆಗ್ಡೆ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಡಾ| ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಸಂಜೀವ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮಾಣಿಕೊಳಲು ಶ್ರೀ ಚನ್ನಕೇಶವ ದೇವಾಲಯ ಸನ್ನಿಧಾನದಿಂದ ಕುಂದಬಾರಂದಾಡಿ ಮಾಸ್ತಿಕಟ್ಟೆಯವರೆಗೆ ವಿದ್ಯಾರ್ಥಿಗಳು ಹಾಗೂ ಊರವರಿಂದ ಸುವರ್ಣ ಪುರಮೆರವಣಿಗೆ ನಡೆಯಿತು.

Shri Kolkebailu Soorappa Shetty high school Haklady morning (1)

Exit mobile version