ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿ ಎನ್.ಸಿ.ಸಿ ಸೇನಾ ಕೆಡೆಟ್ ಜೂನಿಯರ್ ಅಂಡರ್ ಆಫೀಸರ್ ಹನಿ ಹೆಗ್ಡೆ ಅವರು ಸೆಪ್ಟೆಂಬರ್ 1, 2025 ರಿಂದ ಸೆಪ್ಟೆಂಬರ್ 12, 2025 ರವರೆಗೆ ದೆಹಲಿಯಲ್ಲಿ ನಡೆಯಲಿರುವ ಥಾಲ್ ಸೈನಿಕ್ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 1 ರಿಂದ ಜೂನ್ 10, 2025 ರವರೆಗೆ ಕಾರ್ಕಳದಲ್ಲಿ ನಡೆದ ಮೊದಲ ಶಿಬಿರ, ಜುಲೈ 6 ರಿಂದ ಜುಲೈ 15, 2025 ರವರೆಗೆ ಮೂಡಬಿದ್ರಿಯಲ್ಲಿ ನಡೆದ ಎರಡನೇ ಶಿಬಿರ, ಜುಲೈ 17 ರಿಂದ ಜುಲೈ 26, 2025 ರವರೆಗೆ ಮೈಸೂರಿನಲ್ಲಿ ನಡೆದ ಮೂರನೇ ಶಿಬಿರ TSC – IGC, ಜುಲೈ 27 ರಿಂದ ಆಗಸ್ಟ್ 5, 2025 ರವರೆಗೆ ಮೈಸೂರಿನಲ್ಲಿ ನಡೆದ ನಾಲ್ಕನೇ ಶಿಬಿರ TSC – 1, ಆಗಸ್ಟ್ 10 ರಿಂದ ಆಗಸ್ಟ್ 19, 2025 ರವರೆಗೆ ಮೈಸೂರಿನಲ್ಲಿ ನಡೆದ 5ನೇ ಶಿಬಿರ TSC – 2 ಮತ್ತು ಆಗಸ್ಟ್ 20 ರಿಂದ ಆಗಸ್ಟ್ 29, 2025 ರವರೆಗೆ ಮೈಸೂರಿನಲ್ಲಿ ನಡೆದ 6 ನೇ ಶಿಬಿರ TSC – 3 ರಲ್ಲಿ ಭಾಗವಹಿಸಿದ್ದರು.
ಈ ಎಲ್ಲಾ ಶಿಬಿರಗಳನ್ನು ಯಶಸ್ವಿಯಾಗಿರುವ ಪೊರೈಸಿ ಥಾಲ್ ಸೈನಿಕ್ ಶಿಬಿರಕ್ಕೆ ಆಯ್ಕೆ ಆಗಿರುವ ಅವರು ಸಾಧನೆಗೆ ಕಾಲೇಜಿನ ವಿಶ್ವಸ್ಥ ಮಂಡಳಿ ಆಡಳಿತ ಮಂಡಳಿ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

