Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜು: ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕೇತರ ಸಮಸ್ಯೆಗಳು ಹಾಗೂ ಪರಿಹಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿನಿಯರಲ್ಲಿ ಅಡಗಿರುವ ಹಲವಾರು ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಾ, ಮಾನಸಿಕ ಖಿನ್ನತೆ, ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ, ಆರೋಗ್ಯದ ಬಗ್ಗೆ ಮತ್ತು ಇಂದಿನ ಯುಗದಲ್ಲಿ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ದೈಹಿಕ ಹಾಗೂ ಬೌದ್ಧಿಕ ಸಮಸ್ಯೆಗಳ ಬಗ್ಗೆ ಮತ್ತು ಇವುಗಳ ಪರಿಹಾರಗಳ ಬಗ್ಗೆ ಡಾ. ಎನ್. ಆರ್. ಆಚಾರ್ಯ ಆಸ್ಪತ್ರೆಯ ಮನೋರೋಗ ತಜ್ಞರು ಡಾ. ಮಹಿಮಾ ಆಚಾರ್ಯ ತಿಳಿಸಿದರು.

ಅವರು ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಮಹಿಳಾ ದೌರ್ಜನ್ಯ ತಡೆ ಮತ್ತು ಕರ್ನಾಟಕ ದಕ್ಷಿಣ ಪ್ರಾಂತ್ಯ, ನ್ಯಾಷನಲ್ ಮೆಡಿಕೋಸ್ ಒರ್ಗನೈಸೇಷನ್ (ಎನ್‌ಎಮ್‌ಒ) ಇವರ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಲ್ಲಿ ಶೈಕ್ಷಣಿಕೇತರ ಸಮಸ್ಯೆಗಳು ಮತ್ತು ಪರಿಹಾರಗಳು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರು ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ನಾಗರಾಜ ಯು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಉಪಸ್ಥಿತರಿದ್ದರು. ಹಾಗೂ ಡಾ. ಶ್ರೀಕಾಂತ್ ಶೆಟ್ಟಿ ನೇತ್ರ ತಜ್ಞರು, ನ್ಯೂ ಮೆಡಿಕಲ್ ಸೆಂಟರ್, ಕುಂದಾಪುರ ಮತ್ತು ವಸಂತ ಉಡುಪ, ಗಣೇಶ್ ಪೈ ಎಂ., ರೋಹಿಣಿ ಇವರು ಉಪಸ್ಥಿತರಿದ್ದರು.

ಅಂತಿಮ ಬಿ.ಎ. ರಕ್ಷಿತಾ ಕೆ. ಪ್ರಾರ್ಥಿಸಿದರು. ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕರು ಡಾ. ಭಾಗೀರಥಿ ನಾಯ್ಕ ಸ್ವಾಗತಿಸಿ, ಅಂತಿಮ ಬಿ.ಎ., ಕೃತಿಕಾ ನಿರೂಪಿಸಿ, ದೀಕ್ಷಾ ಅಂತಿಮ ಬಿ.ಎ. ವಂದಿಸಿದರು.

Exit mobile version