ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರಗ ಅಭಿವೃದ್ಧಿ ಬೆಳ್ಮಣ್ ಸಂಘದ 2025- 26ನೇ ಸಾಲಿನ ಅಧ್ಯಕ್ಷರಾಗಿ ಶಶಿಕಲಾ ನಕ್ರೆ ಮತ್ತು ಉಪಾಧ್ಯಕ್ಷರಾಗಿ ಸುರೇಖಾ ಮುಂಡ್ಕೂರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸುಪ್ರೀತಾ ಮುಂಡ್ಕೂರು, ಜೊತೆ ಕಾರ್ಯದರ್ಶಿಯಾಗಿ ಲಲಿಲಾ ಮುಂಡ್ಕೂರು,ಕೊಶಾಧಿಕಾರಿಯಾಗಿ ರೋಹಿತ್ ಇನ್ನಾ, ಒಕ್ಕೂಟಕ್ಕೆ ಸುಪ್ರಿತಾ ಮುಂಡ್ಕೂರು, ಶೀನಾ ಇನ್ನಾ ಮತ್ತು ಗುಲಾಬಿ ಇನ್ನಾ ಹಾಗೂ ಜಿಲ್ಲಾ ಸಮಿತಿಗೆ ಸುನಿಲ್ ಕಾರ್ಕಳ ಮತ್ತು ತಾಲೂಕು ಸಮಿತಿಗೆ ರಮಣಿ ಇನ್ನಾ ಆಯ್ಕೆಯಾದರು.
ಮುಖ್ಯ ಅತಿಥಿ ಬೊಗ್ರ ಕೊಕ್ಕರ್ಣೆ ಸಂಘಟನೆ ಇತಿಹಾಸದ ಕುರಿತು ಮಾತನಾಡಿದರು. ನರಸಿಂಹ ಪೆರ್ಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರೋಹಿತ್ ಇನ್ನಾ ಸ್ವಾಗತಿಸಿದ, ಶೀನಾ ಇನ್ನಾ ಧನ್ಯವಾದಗೈದರು.

