ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ವಿಭಾಗಗಳು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎಸ್.ಎಸ್.ಎಲ್ ಇಂಡಿಯಾ ಇವರು ಸಹಯೋಗದಲ್ಲಿ ಭಾರತ ಮತ್ತು ಜರ್ಮನಿಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವು ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಪರಸ್ಪರ ಜರ್ಮನ್ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಾಂಪ್ರದಾಯಿಕ, ಸಾಂಸ್ಕೃತಿಕ ವಿಚಾರ ವಿನಿಮಯ ಮಾಡಿಕೊಂಡರು. ಪರಸ್ಪರ ಸಂಸ್ಕೃತಿಗಳ ಶೈಕ್ಷಣಿಕ, ಆರೋಗ್ಯ, ಆಹಾರ, ಕಲೆ ಮತ್ತು ಸಂಸ್ಕೃತಿಗಳ ಕುರಿತು ವೈಶಿಷ್ಟ್ಯವಾಗಿ ಪರಿಚಯಿಸಿ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಎಫ್. ಎಲ್ ಇಂಡಿಯಾ ಇದರ ಉಪನಿರ್ದೇಶಕ ರಾಗ್ಲ್ಯಾಂಡ್ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು.
ಎಫ್.ಎಸ್.ಎಲ್ ಇಂಡಿಯಾ ಇದರ ಮುಖ್ಯ ಸಂಯೋಜಕಿ ನಾಗರತ್ನ, ಎಲ್.ಟಿ.ವಿ ವಿಭಾಗದ ದಿನೇಶ್ ಮತ್ತು ಶರಣ್ ಪೌಲ್ ವಿವಿಧ ಚಟುವಟಿಕೆಗಳನ್ನು ಮಾಡಿಸಿದರು.
ರೇಡಿಯೋ ಕುಂದಾಪ್ರ ಇದರ ಕಾರ್ಯಕ್ರಮ ನಿರೂಪಕಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.