Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನ ಸುಬ್ರಹ್ಮಣ್ಯಗೆ ಪಿಎಚ್‌ಡಿ ಪದವಿ

ಕುಂದಾಪುರ: ಡಾ. ಸುಬ್ರಹ್ಮಣ್ಯ.ಬಿ ಇವರು ಪ್ರೊ.ಡಿ.ಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ‘ ಸಿಂಥೆಸಿಸ್ ಆಫ್ ಗ್ರಾಫೇನ್ ಎಂಡ್ ಇಟ್ಸ್ ಕಾಂಪೊಸಿಟ್ಸ್ ಫಾರ್ ಎನರ್ಜಿ ಎಪ್ಲಿಕೇಶನ್ಸ್’ ಎನ್ನುವ ಮಹಾ ಪ್ರಬಂಧಕ್ಕೆ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಬೈಂದೂರಿನ ಭದ್ರಯ್ಯನ ಮಂಜುನಾಥ ಶೇರುಗಾರ್ ಮತ್ತು ಪಾರ್ವತಿ ಶೇರುಗಾರ್ ದಂಪತಿಯ ಪುತ್ರನಾಗಿದ್ದು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಮತ್ತು ಬೈಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುತ್ತಾರೆ. ಪ್ರಸ್ತುತ ಇವರು ಮಂಬಯಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೋಸ್ಟ್ ಡಾಕ್ಟರಲ್ ಫೆಲೊ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Exit mobile version