Site icon Kundapra.com ಕುಂದಾಪ್ರ ಡಾಟ್ ಕಾಂ

ಅಬ್ಬಕ್ಕನವರ ಶೌರ್ಯ, ಧೈರ್ಯ ಮತ್ತು ಸಾಹಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಾ. ಮಹೇಶ್ ಜೋಶಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ರಿ ಮತ್ತು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಅಬ್ಬಕ್ಕ @500 ಪ್ರೇರಣದಾಯಿ 100 ಉಪನ್ಯಾಸಗಳ ಸರಣಿ –ಎಸಳು 42 ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತು ಇದರ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಬ್ಬಕ್ಕನವರ ಶೌರ್ಯ, ಧೈರ್ಯ ಮತ್ತು ಸಾಹಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವಳು ಜೀವನವೇ ಇಂದಿನ ಯುವ ಮನಸ್ಸುಗಳಿಗೆ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.

ರಾಣಿ ಅಬ್ಬಕ್ಕ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ವೃತ್ತಿ ಮಾರ್ಗದರ್ಶಕರಾದ  ಸತ್ಯಶ್ರೀ ಗೌತಮ್ ಅವರು ರಾಣಿ ಅಬ್ಬಕ್ಕ ಅವರು ಜೀವನ ಮತ್ತು  ಧೈರ್ಯ ಸಾಹಸಗಳು ಎಂದಿಗೂ ಆದರ್ಶ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಎಸ್.ಆರ್ ವಿಜಯ್ ಕುಮಾರ್ , ಗೌರವ ಕಾರ್ಯದರ್ಶಿಗಳಾದ ಪಾಟೀಲ್ ಪಾಂಡು, ಕೇರಳ  ಗಡಿನಾಡು ಘಟಕದ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ರಿ ಮಂಗಳೂರು ವಿಭಾಗ ಇದರ ಕಾರ್ಯದರ್ಶಿಗಳಾದ ಡಾ. ಮಾಧವ ಸ್ವಾಗತಿಸಿ, ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿ,  ಅಬ್ಬಕ್ಕ @500* ಪ್ರೇರಣದಾಯಿ 100 ಉಪನ್ಯಾಸಗಳ ಸರಣಿ -ಎಸಳು 42 ಕಾರ್ಯಕ್ರಮದ ಕಾಲೇಜು ಸಂಯೋಜಕರಾದ ಶಂಕರನಾರಾಯಣ ವಂದಿಸಿದರು.

Exit mobile version