ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜದಲ್ಲಿನ ಅಸ್ಪೃಶ್ಯತೆ ಪಿಡುಗಿಗೆ ತಮ್ಮದೇ ನಿಲುವಿನಲ್ಲಿ ಸಮಾಧಾನಕರ ಉಪಾಯಗಳನ್ನು ಕಂಡುಕೊಂಡು, ಜೀವನವನ್ನು ಸಮಾಜದಲ್ಲಿ ಸಮಾನತೆಗಾಗಿ ಮುಡಿ-ಪಾಗಿಟ್ಟವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುವ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮಾನವರಲ್ಲಿ ಇರುವುದು ಒಂದೇ ಕುಲ, ಒಂದೇ ಜಾತಿ, ಒಂದೇ ದೇವರು ಎನ್ನುವ ಸಂದೇಶ ನೀಡಿದವರು. ವಿದ್ಯೆಯಿಂದ ಬಲಯುತರಾಗಬೇಕು, ಸಮಾನತೆ ನಮ್ಮ ಉಸಿರಾಗಿರಬೇಕು ಎಂದು ಹೇಳಿದ್ದ ಅವರು, ಕೇರಳದಿಂದ ಆರಂಭ ಮಾಡಿದ್ದ ಸಾಮಾಜಿಕ ಬದಲಾವಣೆ, ದೇಶಾದ್ಯಂತ ವಿಸ್ತರಿಸಿದ್ದರು. ವಿಶ್ವ ಮಾನವತ್ವದ ಗುರು, ಶಾಂತಿ ಪಥದ ನಡಿಗೆ ಹೇಳಿಕೊಟ್ಟಿದ್ದ ಅವರು ಬದುಕಿದ, ಪ್ರತಿಪಾದಿಸಿದ ದಾರಿಯಲ್ಲಿ ನಾವು ಸುಧಾರಣೆಗಳನ್ನು ನಡೆಯೋಣ ಎಂದರು.
ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ಕಂದಾಯ ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ತಾ.ಪಂ. ಕಾರ್ಯನಿರ್ವ-ಹಣಾ ಅಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾವ್ಯಕ್ಕಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಕೋ, ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಪುರಸಭೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿ. ಪ್ರಭಾಕರ, ಹೆಮ್ಮಾಡಿ ಜನತಾ ಕಾಲೇಜಿನ ಕನ್ನಡ ಉಪನ್ಯಾಸಕ ನಾಗರಾಜ್ ಇದ್ದರು.

