ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶಿರೂರು ಪಿ.ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರನಾರಾಯಣ ಬಿಲ್ಲವ (ಸಿ.ಎನ್. ಬಿಲ್ಲವ) ಶಿರೂರು ಅವರು ಕರ್ನಾಟಕ ರಾಜ್ಯ ಸರಕಾರವು ಡಾ. ಸರ್ವೆಪಲ್ಲಿ ರಾಧಕೃಷ್ಣನ್ ಅವರ ಹೆಸರಿನಲ್ಲಿ ನೀಡಲಾಗುವ 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 20 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ಸಿ.ಎನ್. ಬಿಲ್ಲವ ಅವರು ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಿಕ್ಷಕರಾಗಿದ್ದಾರೆ.
ಸಿ.ಎನ್. ಬಿಲ್ಲವ ಅವರು 60ಕ್ಕೂ ಹೆಚ್ಚು ಇಲಾಖಾ ತರಬೇತಿ ಪಡೆದಿದ್ದು ಜಿಲ್ಲಾ, ರಾಜ್ಯ ಮಟ್ಟದ ತರಬೇತಿಯ ಜೊತೆಗೆ ಸ್ಕಟ್, ಮಾಹಿತಿ ಸಿಂಧು, ಯೋಗ ಮುಂತಾದ ತರಬೇತಿಯನ್ನು ಪಡೆದಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆ, ಕೇ ಆರ್ಟ್ಸ್, ಕ್ರಾಫ್ಟ್, ಮರಳು ಶಿಲ್ಪ,ಕಲಿಕಾ ಮಾದರಿ ತಯಾರಿ, ಕಥೆ, ಕವನ, ನಾಟಕ ರಚನೆ, ಪತ್ರಿಕೆ ಸಂಪಾದಕತ್ವ, ಸಿಮೆಂಟ್ ಕಲಾಕೃತಿ ತಯಾರಿ, ಗಾರ್ಡನ್/ತೋಟಗಾರಿಕೆ ಜೊತೆಗೆ ಯೋಗ, ನಾಟಕ ಮತ್ತು ಯಕ್ಷಗಾನದ ಗೀಳು, ಶಿಕ್ಷಕ ವೃತ್ತಿಯೊಂದಿಗೆ ಬಿಡುವಿನ ಸಮಯದಲ್ಲಿ ಸಂಘ ಪರಿವಾರದೊಂದಿಗೆ ವ್ಯವಹರಿಸುತ್ತಾ ಜೆ.ಸಿ, ಹಳೆ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ, ಶಾರದೋತ್ಸವ ಸಮಿತಿ ಮುಂತಾದ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸೃಜನ ಶೀಲತೆ ಹಾಗೂ ಕೌಶಲ್ಯಗಳಿಗೆ ನೀರೆರೆದು ಪೋಷಿಸಿದ್ದಾರೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ 3 ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಕೇ ಮಾಡಲಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ನನ್ನ ಶಾಲಾ ಕೈತೋಟ ಪ್ರಶಸ್ತಿ, ಜಿಲ್ಲಾ ಮಟ್ಟದಲ್ಲಿ ಸತತ 8 ಬಾರಿ ಪ್ರಥಮ ಬಹುಮಾನ ಹಾಗೂ 3 ಬಾರಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದು ಹಾಗೂ 1 ಬಾರಿ ರಾಜ್ಯ ಮಟ್ಟದಲ್ಲಿ ಕಲಿಕಾ ಮಾದರಿ ತಯಾರಿಗೆ ಬಹುಮಾನ ಬಂದಿದ್ದು ಉತ್ತಮ ಜನಗಣತಿ ಕಾರ್ಯಕ್ಕೆ ರಾಷ್ಟ್ರಪತಿ ಬೆಳ್ಳಿ ಪದಕ ಬಂದಿದೆ ಹಾಗೂ 202ರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

