ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.14: ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ. ಕುಂದಾಪುರದ ಅಧ್ಯಕ್ಷರಾಗಿ ಎಚ್. ಆರ್. ಶಶಿಧರ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಪಿ. ಎಸ್ ಅವರು ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.
ಭಾನುವಾರ ಕುಂದಾಪುರ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಮಹಾಸಭೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯಾಧ್ಯಕ್ಷರಾಗಿ ಶ್ರೀನಿವಾಸ ಶೇರುಗಾರ್ ಹೆಬ್ರಿ, ಉಪಾಧ್ಯಕ್ಷರುಗಳಾಗಿ ನಾಗರಾಜ ಕಾಮಧೇನು, ಸೀತಾರಾಮ ಹಳದಿಪುರ, ಮಂಜುನಾಥ ಕೆ.ಎನ್., ವಾಮನ ರಾವ್ ಬೇಕಲ್, ಬಿ.ಎಂ.ನಾಥ್, ಕಾರ್ಯದರ್ಶಿಗಳಾಗಿ ಷಣ್ಮುಕ, ಡಿ. ಸತೀಶ್, ಅಣ್ಣಪ್ಪ ನಾಯ್ಕ್, ಗಣಪತಿ ಹೋಬಳಿದಾರ್, ರಶ್ಮಿರಾಜ್ ಕುಂದಾಪುರ, ಕೋಶಾಧಿಕಾರಿಯಾಗಿ ಕರುಣಾಕರ ಯು, ಸಂಘಟನಾ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಪಿ. ನಾಯ್ಕ್, ಅನಿಲ್ ಹೊಸನಗರ, ಪದ್ಮನಾಭ ಕೊತ್ವಾಲ್, ಮಂಜುನಾಥ ಎನ್, ಲೆಕ್ಕ ಪರಿಶೋಧಕರಾಗಿ ಗಣಪತಿ ಎನ್. ಶೇರುಗಾರ್, ಕಾನೂನು ಸಲಹೆಗಾರರಾಗಿ ಹೂವಯ್ಯ ಶೇರುಗಾರ್, ಸಂಪಾದಕರುಗಳಾಗಿ ರೇಖಾ ಸುದೇಶ್ ಆಯ್ಕೆಯಾಗಿದ್ದಾರೆ. ಒಟ್ಟು 45 ಮಂದಿ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡಿದ್ದು, ಎಲ್ಲಾ ಪಧಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡರು. /ಕುಂದಾಪ್ರ ಡಾಟ್ ಕಾಂ/
ಇದನ್ನೂ ಓದಿ ► ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯಾಧ್ಯಕ್ಷರಾಗಿ ಶ್ರೀನಿವಾಸ ಕೆ. ಆಯ್ಕೆ – https://kundapraa.com/?p=90138 .

