Site icon Kundapra.com ಕುಂದಾಪ್ರ ಡಾಟ್ ಕಾಂ

ಸಿದ್ದಾಪುರದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
 ಬ್ರಹ್ಮಾವರ ಸಕ್ಕರೆ ಕಾರ್ಖಾನೆ ರೈತಾಪಿ ವರ್ಗಗಳ ಅನುಕೂಲಕ್ಕಾಗಿ ಸ್ಥಾಪನೆಗೊಂಡ ಸಕ್ಕರೆ ಕಾರ್ಖಾನೆಯಾಗಿದೆ. ಕಾರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಹಡಲು ಭೂಮಿಗಳಿವೆ. ಆ ಭೂಮಿಗಳಲ್ಲಿ ಜಿಲ್ಲೆಯ ರೈತರಿಗೆ ಕಬ್ಬು ಬೆಳೆಯಲು ಉತ್ತೇಜನ ನೀಡುವ ಜತೆಗೆ ಸಾಲ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ಹಾಕಿಕೊಳ್ಳಬೇಕು ಎಂದು ಕಮಲಶಿಲೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ಹೇಳಿದರು.

ಅವರು ನಾಗರಿಕ ಸಮ್ಮಾನ ಸಮಿತಿ ಸಿದ್ದಾಪುರ ಇವರ ವತಿಯಿಂದ ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಅಧ್ಯಕ್ಷರಾಗಿ ಚುನಾಯಿತರಾದ ಬಿ. ಸತೀಶ್ ಕಿಣಿ ಬೆಳ್ವೆ ಹಾಗೂ ಉಪಾಧ್ಯಕ್ಷ ಎಸ್. ಸಂಜೀವ ಶೆಟ್ಟಿ ಸಂಪಿಗೇಡಿ ಅವರಿಗೆ ಸಿದ್ದಾಪುರ ಶ್ರೀ ರಂಗನಾಥ ಸಭಾಭವನದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮ ನೆರವೇರಿಸಿ, ಮಾತನಾಡಿದರು.

ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಸತೀಶ್ ಕಿಣಿ ಬೆಳ್ವೆ ಮತ್ತು ಸಂಪಿಗೇಡಿ ಸಂಜೀವ ಶೆಟ್ಟಿ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದು ರೈತಾಪಿ ವರ್ಗದಲ್ಲಿ ಆಶಾದಾಯಕಾಗಿದೆ

ದ.ಕ.ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರದ ಅಧ್ಯಕ್ಷ ಬೆಳ್ವೆ ಸತೀಶ್ ಕಿಣಿ ಅವರು ಸಮ್ಮಾನ ಸ್ವೀಕರಿ ಮಾತನಾಡಿ, ಆಯ್ಕೆಯಿಂದ ಜವಾಬ್ದಾರಿಗಳು ಹೆಚ್ಚಿದೆ. ಸಕ್ಕರೆ ಕಾರ್ಖಾನೆ ಪುನಃರಾರಂಭಿಸಲು ಕಬ್ಬು ಬೆಳೆಯಲು ಉತ್ತೇಜನ ನೀಡಬೇಕು. ಕಬ್ಬು ಬೆಳೆಯಲು ಉತ್ತೇಜನ ನೀಡುವ ಬಗ್ಗೆ ರೈತಾಪಿ ಕುಟುಂಬಗಳ ಮನೆ ಮನೆಗೆ ಭೇಟಿ ನೀಡಲಾಗುವುದು. ಹಂತ ಹಂತವಾಗಿ ಸಕ್ಕರೆ ಕಾರ್ಖಾನೆ ಅಭಿವೃದ್ದಿಗೆ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪ್ರಯತ್ನಿಸಲಾಗಿವುದು ಎಂದರು.

ಉಪಾಧಕ್ಷ ಸಂಜೀವ ಶೆಟ್ಟಿ ಸಂಪಿಗೇಡಿ ಸಮ್ಮಾನ ಸ್ವೀಕರಿಸಿ, ಮಾತನಾಡಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಅವರು ಅಭಿನಂದನಾ ಭಾಷಣ ಮಾಡಿದರು.

ಸಿದ್ದಾಪುರ ನಾಗರಿಕ ಸಮ್ಮಾನ ಸಮಿತಿಯ ಅಧ್ಯಕ್ಷ ಡಾ| ಶ್ರೀಕಾಂತ ರಾವ್ ಅವರು ನಾಗರಿಕ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅಭ್ಯಾಗತರಾಗಿ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಶ್ರೀಲತಾ ಶೆಟ್ಟಿ, ನಾಗರಿಕ ಸಮ್ಮಾನ ಸಮಿತಿಯ ಕೋಶಾಧಿಕಾರಿ ಶ್ರೀಕಾಂತ ನಾಯಕ್ ಐರ್‌ಬಲು, ಉಪಾಧ್ಯಕ್ಷರಾದ ಎನ್. ಶೇಖರ್ ಶೆಟ್ಟಿ ಕಡ್ರಿ, ಭರತ್ ಕಾಮತ್ ದಕ್ಕೇರ್ಬಾಳು, ನಾರಾಯಣ ಶೆಟ್ಟಿ ಜನ್ಸಾಲೆ, ಯಕ್ಷ ನುಡಿಸಿರಿ ಬಳಗ ಸಿದ್ದಾಪುರ, ರೋಟರಿ ಕ್ಲಬ್ ಸಿದ್ದಾಪುರ-ಹೊಸಂಗಡಿ, ಹಿರಿಯ ನಾಗರಿಕರ ವೇದಿಕೆ ಸಿದ್ದಾಪುರ, ಭಾರತೀಯ ಕಿಸಾನ್ ಸಂಘ ಸಿದ್ದಾಪುರ ವಲಯ, ಭೋಜ ಪೂಜಾರಿ ಚಾರಿಟೇಬಲ್ ಟ್ರಸ್ಟ್ ಬೆಚ್ಚಳ್ಳಿ, ಕಡ್ರಿ ನಾರಾಯಣ ಮಾಸ್ಟರ್ ಮೆಮೊರಿಯಲ್ ಟ್ರಸ್ಟ್ ಸಿದ್ದಾಪುರ, ಗ್ರಾಮ ವಿಕಾಸ ಸಮಿತಿ ಸಿದಾಪುರ, ಶ್ರೀ ಬನಶಂಕರಿ ಯುವಕ ಮಂಡಲ ಉಳ್ಳೂರು-74 ಇದರ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ನಾಗರಿಕ ಸಮ್ಮಾನ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ ಉಳ್ಳೂರು ಸ್ವಾಗತಿಸಿದರು. ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ| ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಚಂದ್ರಶೇಖರ ಶೆಟ್ಟಿ ಕಡ್ರಿ ಮತ್ತು ಸದಾನಂದ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಸತೀಶಕುಮಾರ ಶೆಟ್ಟಿ ಕಡ್ರಿ, ಉದಯ ಮಡಿವಾಳ, ಸಂತೋಷಕುಮಾರ ಶೆಟ್ಟಿ ಕಡ್ರಿ ಸಹಕರಿಸಿದರು. ಸಮಿತಿಯ ಉಪಾಧ್ಯಕ್ಷ ಕೆ. ಭೋಜ ಶೆಟ್ಟಿ ಕಡ್ರಿ ವಂದಿಸಿದರು.

Exit mobile version