ಕುಂದಾಪ್ರ ಡಾಟ್ ಕಾಂ ವರದಿ.
‘ಕಾರ್ಟೂನ್ ತೋರ‍್ಸದ್ ಹೊರ‍್ತು ನಮ್ ಎಮ್ಮಿ ಹಾಲ್ ಕೊಡುದಿಲ್ಲೇ’ ಎಂದು ಲಾಲುವನ್ನು ಛೇಡಿಸಿದ ಸ್ವಾಗತ ‘ಬಂಗ್ಡಿ ಮಿಡಕ್ತಾ ಅಂದ್ಹೇಳಿ ನಮ್ಮನಿಯವ್ಳಿಗೆ ವಾಟ್ಸಪಂಗೆ ಕಾಣ್ಕೆ ಅಬ್ರ್ ಮಾರಾಯ್ತಿ’ ಎಂದು ಮೀನು ಕೊಳ್ಳುವವನು ಹೇಳಿದ್ದಕ್ಕೆ ‘ಅದು ವಿಡ್ಕುದ್ ಹನಿಸಿಂಗ್ ಪದ್ಯ ಹಾಕಿದಾಗ’ ಎಂದು ಜಾಡಿಸುವ ಉತ್ತರ. ಇದು ಕುಂದಾಪುರ ಕಲಾಮಂದಿರದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ‘ಕಾರ್ಟೂನು ಹಬ್ಬ’ದಲ್ಲಿ ಕಂಡ ಕಾರ್ಟೂನ್ ಡೈಲಾಗ್‌ಗಳು. ಕಾರ್ಟೂನು ವೀಕ್ಷಣೆಗೆ ಬಂದ ವೀಕ್ಷಕರ ತುಡಿಯಂಚಿನಲ್ಲೂ ಪದೇ ಪದೇ ಮಾತುಗಳು ಹೊರಳುತ್ತಿದ್ದವು.
[quote bgcolor=”#ffffff” arrow=”yes” align=”right”]ಕುಂದಾಪುರದಲ್ಲಿ ಸಾಕಷ್ಟು ವ್ಯಂಗ್ಯಚಿತ್ರಕಾರರ ದೊಡ್ಡ ತಂಡವೇ ಇದ್ದು, ಅವರು ಸಾಗಿಬಂದ ದಾರಿಯ ಸಿಂಹಾವಲೋಕನ ಮಾಡುವುದರೊಂದಿಗೆ, ಯುವಜನರಲ್ಲಿ ವ್ಯಂಗ್ಯಚಿತ್ರದತ್ತ ಒಲವು ಮೂಡಿಸುವ ಮತ್ತು ಅವರಿಗೊಂದು ಪ್ರೇರಣೆ ನೀಡುವ ಉದ್ದೇಶದಿಂದ ಕಾರ್ಟೂನು ಹಬ್ಬವನ್ನು ಆಯೋಜಿಸಲಾಗಿದೆ. -ಸತೀಶ್ ಆಚಾರ‍್ಯ, ಕಾರ್ಟೂನಿಷ್ಠ್[/quote]
ಯಮ ಅಂಕಲ್ ನಾನೇ ಫಸ್ಟ್, ವೇಗ ಕೊಲ್ಲುತ್ತೆ, ನಮ್ ಮನಿ ಗಂಡ್ ಎಷ್ಟ್ ಚಂದ ಕಾರ್ ಓಡ್ಸತ್ ಕಾಣಿ, ನಮ್ಮ ಹಾಗೂ ನಮ್ಮ ವಾಹನದ ಮಧ್ಯೆ ಬಾರದಿರಲಿ ಮದ್ಯ ಹೀಗೆ ಸಾಮಾಜಿಕ ಕಳಕಳಿ ಮೂಡಿಸುವ ಕಾರ್ಟೂನ್ ಡೈಲಾಗ್ಸ್‌ಗಳು ವೀಕ್ಷಕರ ಚಿತ್ತಭಿತ್ತಿಯಲ್ಲಿ ಗಟ್ಟಿಯಾಗಿ ನಿಂತವು. ಹಾಗೇಯೇ ಉಪ್ಪಿ-2 ಸಿನೆಮಾ ವೀಕ್ಷಿಸಲು ಥೀಯೇಟರ್‌ಗೆ ಹೊದ ವ್ಯಕ್ತಿಯೊಬ್ಬ ತಲೆಕೆಳಗಾಗಿ ಕಾಲಿನಲ್ಲಿ ಟಿಕೇಟ್ ಕೇಳುವ ದೃಶ್ಯ ಜನರ ಬದಲಾಗುವ ಮನೋಭಾವದ ಸಿಂಬಲ್ ಆಗಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)
ದೇಶಕ್ಕೆ ಹಲವು ವ್ಯಂಗ್ಯಚಿತ್ರಕಾರರನ್ನು ಕೊಟ್ಟ ಕುಂದಾಪುರ ಮತ್ತೆ ಕಾರ್ಟೂನಿಂದಲೇ ಸದ್ದು ಮಾಡಹೊರಟಿದೆ. ಮಣ್ಣಿನ ಗುಣವೂ, ಪ್ರತಿಭೆಗೆ ಸಾಣೆ ಹಿಡಿದ ಫಲವೂ ಕುಂದಾಪುರದ ವ್ಯಂಗ್ಯಚಿತ್ರಕಾರರು ಪ್ರಪಂಚವನ್ನೇ ಅಣಕಿಸಿ, ನಗಿಸಿ ಯಶಕಂಡಿದ್ದಾರೆ. ಕುಂದಾಪುರದಲ್ಲಿದ್ದುಕೊಂಡೇ ಕಾರ್ಟೂನ್ ಪ್ರಪಂಚಕ್ಕೆ ತೆರೆದುಕೊಳ್ಳುವುದರ ಜೊತೆಗೆ ಕಾರ್ಟೂನ್ ಲೋಕದ ಹೊಸ ಸಾಧ್ಯತೆಗಳನ್ನು ಅರಿತು, ಬೆರೆತು, ಕಾರ್ಟೂನಿಷ್ಟ್ ಹಾಗೂ ಕಾರ್ಟೂನ್ ಪ್ರೀಯರಿಗೆ ಮುಖಾಮುಖಿಯಾಗುತ್ತಾ, ನಿಮ್ಮಲ್ಲಿನ ಕಾರ್ಟೂನ್ ಪ್ರೀತಿಯನ್ನು ಗುರುತಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದ ಖ್ಯಾತ ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ಅವರ ಮುಂದಾಳತ್ವದಲ್ಲಿಯೇ ಈ ಭಾರಿಯ ಕಾರ್ಟೂನು ಹಬ್ಬ ಕಳೆಗಟ್ಟಿದ್ದು, ದಿನೇ ದಿನೇ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. (ಕುಂದಾಪ್ರ ಡಾಟ್ ಕಾಂ ವರದಿ)
* ಏನೇನಿದೆ:
ಕಾರ್ಟೂನ್ ಪ್ರದರ್ಶನ – ಕುಂದಾಪುರ ಮೂಲದವರಾಗಿದ್ದು ದೇಶದ ಪ್ರಸಿದ್ಧ ಪತ್ರಿಕೆ ಹಾಗೂ ವೆಬ್-ಸೈಟ್ ಗಳಿಗೆ ಕಾರ್ಟುನ್ ಬರೆಯುತ್ತಿರುವವರ ಕಾರ್ಟೂನ್ ಪ್ರದರ್ಶನ
ಕಾರ್ಟೂನ್ ಕಾರ್ಯಾಗಾರ, ಮಾಸ್ಟರ್ ಸ್ಟ್ರೋಕ್ – ಖ್ಯಾತ ವ್ಯಂಗ್ಯಚಿತ್ರಕಾರರಿಂದ ಸ್ಥಳದಲ್ಲೇ ಒಂದೇ ವಿಷಯದಲ್ಲಿ ಕಾರ್ಟೂನ್ ರಚನೆ ಅದರ ಕುರಿತಂತೆ ಮಾತುಕತೆ ಇರಲಿದೆ.
ಸ್ಥಳದಲ್ಲೇ ಕ್ಯಾರಿಕೇಚರ್ – ಶಾಲೆಗೆ ನಿಧಿ ಸಂಗ್ರಹಿಸುವ ಸಲುವಾಗಿ ಖ್ಯಾತ ಕಾರ್ಟೂನಿಷ್ಠಗಳಿಂದ ಕ್ಯಾರಿಕೇಚರ್ ರಚಿಸಿಕೊಡಲಾಗುವುದು.
ವಿದ್ಯಾರ್ಥಿಗಳಿಗೆ ಕಾರ್ಟೂನ್ ಸ್ವರ್ಧೆ- ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯ್ದ ವಿಷಯಗಳಲ್ಲಿ ಕಾರ್ಟೂನ್ ರಚಿಸುವ ಸ್ವರ್ಧೆ. (ಕುಂದಾಪ್ರ ಡಾಟ್ ಕಾಂ ವರದಿ)
ವಿದ್ಯಾರ್ಥಿನಿಯರಿಗೆ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ – ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ ಜರುಗಲಿದೆ.
ಡಾಕ್ಟರ್ ಜೊತೆ ಡೂಡ್ಲಿಂಗ್ – ಕುಂದಾಪುರ ಪರಿಸರದ ಕಾರ್ಟೂನ್ ಪ್ರಿಯ ವೈದ್ಯರುಗಳಿಗಾಗಿ ಕಾರ್ಟೂನ್ ಗೀಚುವ ವಿಶೇಷ ಅವಕಾಶ
ಕಾರ್ಟೂನ್ ಪುಸ್ತಕ – ಕಾರ್ಟೂನ್ ಪ್ರೀಯರಿಗಾಗಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಕಾರ್ಟೂನ್ ಪುಸ್ತಕ ಲಭ್ಯವಿರುತ್ತೆ
ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳು – ಕಾರ್ಟೂನ್ ಡೈಲಾಗ್ ಬರೆಯುವುದು, ಕ್ಯಾರಿಕೇಚರ್ ರಚಿಸುವುದು ಮುಂತಾದ ಸ್ವರ್ಧೆಗಳು ಹಾಗೂ ಆಕರ್ಷಕ ಬಹುಮಾನ
ಸೆಲ್ಫಿ ಕಾರ್ನರ್ – ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಲು ಇಲ್ಲವೇ ವೈಯಕ್ತಿಕ ಸಂಗ್ರಹಕ್ಕಾಗಿ ವಿಶಿಷ್ಟ ಸೆಲ್ಫಿ ಕಾರ್ನರ್.