ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ತಾಲೂಕಿನ 52ನೇ ಹೇರೂರಿನಲ್ಲಿರುವ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ (RUDSET) ಯು ಯುವಕ – ಯುವತಿಯರಿಗಾಗಿ 45 ದಿನಗಳ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ ಹಮ್ಮಿಕೊಂಡಿದೆ.
ತರಬೇತಿಯಲ್ಲಿ ಎಮ್.ಎಸ್.ಆಫೀಸ್, ನುಡಿ, ಬರಹ, ಪೋಟೋಶಾಪ್, ಕೋರಲ್‌ಡ್ರಾ, ಪೇಜ್ ಮೇಕರ್ ಜೊತೆಗೆ ಉದ್ಯಮಶೀಲತಾ ತರಬೇತಿ ನೀಡಲಾಗುತ್ತದೆ. ತರಬೇತಿ ಹಾಗೂ ಈ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ.
ಆಸಕ್ತರು ತಮ್ಮ 4 ಪಾಸ್‌ಪೋರ್ಟ್ ಸೈಜ್ ಪೋಟೋ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್, ಮಾಕ್ಸ್ ಕಾರ್ಡ್, ಆದಾಯ ಪ್ರಮಾಣ ಪತ್ರದೊಂದೊಗೆ ರುಡ್ ಸೆಟ್ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.
ಮಾಹಿತಿಗಾಗಿ ಸಂಪರ್ಕಿಸಿ: 7022560492, 9844086383

