Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಸಿ: ಲಾರಿ ಡಿಕ್ಕಿಯಾಗಿ ಬೈಕ್‌ ಸವಾರನಿಗೆ ಗಂಭೀರ ಗಾಯ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕುಂಭಾಸಿಯ ಆನೆಗುಡ್ಡೆ ಸ್ವಾಗತಗೋಪುರ ಬಳಿ ಮಂಗಳವಾರ ರಾತ್ರಿ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನ್ಸುಲೇಟರ್ ಲಾರಿಯೊಂದು ಉಡುಪಿಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಬುಲೆಟ್ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ.

ಸವಾರರಾದ ಮಾರಣಕಟ್ಟೆಯ ಗಣೇಶ್ ಪೂಜಾರಿ ಮತ್ತು ಪ್ರದೀಪ್ ಗೌಡ ಎಂದು ಗುರುತಿಸಲಾಗಿದೆ.

ಕುಂಭಾಸಿಯಿಂದ ಕೊರವಡಿಗೆ ವಿರುದ್ಧ ದಿಕ್ಕಿನಲ್ಲಿ ಹೋದ ಇನ್ಸುಲೇಟರ್ ಲಾರಿಯೊಂದು ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಇನ್ಸುಲೇಟರ್‌ನ ಕೆಳಭಾಗದಲ್ಲಿ ಬೈಕ್ ಸಿಲುಕಿ ಜಖಂಗೊಂಡಿದೆ. ಬುಲೆಟ್‌ನ್ನು ಸ್ಥಳೀಯರ ಸಹಕಾರದಿಂದ ಎಳೆದು ಹೊರ ತೆಗೆಯಲಾಗಿದೆ. ಇಬ್ಬರು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸಂದರ್ಭ ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Exit mobile version