Site icon Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸಂದೀಪ್ ಪೂಜಾರಿ ಉತ್ತಮ ಸಾಧನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಯೋಗಾಸನ ಭಾರತ್ ಆಶ್ರಯದಲ್ಲಿ ಛತ್ತೀಸ್‌ಗಡ್‌ನ ಅಗ್ರಸೇನ್ ಭವನದಲ್ಲಿ ನಡೆದ 2025-26ನೇ ಸಾಲಿನ 6ನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಬ್ಯಾಕ್ ಬೆಂಡಿಂಗ್ ಯೋಗಾಸನದಲ್ಲಿ ತಾಲೂಕಿನ ಸಂದೀಪ್ ಪೂಜಾರಿ ತ್ರಾಸಿ ಅವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ, ಸೆಮಿಫೈನಲ್‌ನಲ್ಲಿ 4ನೇ ಸ್ಥಾನ ಹಾಗೂ ಫೈನಲ್‌ನಲ್ಲಿ 5ನೇ ಸ್ಥಾನವನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ರಾಷ್ಟ್ರ ಮಟ್ಟದ ಈ ಯೋಗಾಸನ ಸ್ಫರ್ಧೆಯಲ್ಲಿ 22 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ಅನೇಕ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸಂದೀಪ ಪೂಜಾರಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಅವರು ತ್ರಾಸಿ ಗ್ರಾಮ ಪಂಚಾಯತ್ ಉದ್ಯೋಗಿಯಾಗಿದ್ದಾರೆ.

Exit mobile version