ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘ ತ್ರಾಸಿ ಇವರ ವತಿಯಿಂದ ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರು ಮತ್ತು ಚೈತನ್ಯ ಸ್ಪೆಶಲ್ ಸ್ಕೂಲ್, ವಡೇರ ಹೋಬಳಿ ಕುಂದಾಪುರ ಇವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಮೊವಾಡಿ ತ್ರಾಸಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಘುರಾಮ ದೇವಾಡಿಗ ಸಹಿತ ಅಭಿಮಾನಿಗಳಾದ ಮಿಥುನ್ ಎಂ. ಡಿ. ಬಿಜೂರು, ರವಿ ಶೆಟ್ಟಿಗಾರ್, ತ್ರಾಸಿ., ಪಾಂಡುರಂಗ ದೇವಾಡಿಗ, ಗಣೇಶ ದೇವಾಡಿಗ, ಮಹೇಶ ದೇವಾಡಿಗ, ಕಿರಣ್ ದೇವಾಡಿಗ ಉಪಸ್ಥಿತರಿದ್ದರು.