Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಶಯದೇವಿಸುತೆ ಮರವಂತೆ ಅವರ ʼಕೆಂದಾವರೆʼ ಸಿನಿಮಾ ಕೃತಿ ಬಿಡುಗಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಡಾ. ಶಯದೇವಿಸುತೆ ಮರವಂತೆ (ಡಾ. ಜ್ಯೋತಿ ಜೀವನ್‌ಸ್ವರೂಪ್) ಅವರ ಮಹಾ ಕಾದಂಬರಿಯು ವಿನೋದ್‌ಕುಮಾರ್ ಪಿ. ಅವರ ಪರಿಕಲ್ಪನೆಯಲ್ಲಿ ಸಿನಿಮಾ ಶೈಲಿಯ ಬರಹದೊಂದಿಗೆ ಪುನಃ ಸಿದ್ಧತೆಗೊಂಡಿದ್ದು, ಕೃತಿಯನ್ನು ಇತ್ತೀಚೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ತಮ್ಮ ಸ್ವಗೃಹದಲ್ಲಿ ಲೋಕಾರ್ಪಣೆಗೊಳಿಸಿದರು.

ಚಲನಚಿತ್ರ ನಿರ್ಮಾಣದಲ್ಲಿ ಚಿತ್ರಕಥೆ ಹಾಗೂ ಸಂಭಾಷಣೆ ಸಮಯದಲ್ಲಿ ಸಹ ಬರಹಗಾರರಾಗಿ ಚಲನಚಿತ್ರ ನಿರ್ದೇಶಕ ಪನ್ನಗ ಸೋಮ್‌ಶೇಖರ್ ಹಾಗೂ ಕಲಾವಿದ ರಂಗಾಯಣ ಜಗನ್‌ ಅವರು ಡಾ. ಶಯದೇವಿಸುತೆ ಮರವಂತೆ ಅವರಿಗೆ ಬಲು ವಿಶೇಷವಾಗಿ ಸಹಕರಿಸಿದ್ದು, ಸಿನಿಮಾ ಕಾದಂಬರಿಯನ್ನು ಸಿನಿಮಾ ನಿರ್ಮಾಪಕ ಆದಿತ್ಯ ವಿನೋದ್‌ ಅವರ ಹೆಸರಿಗೆ ಕಾನೂನುಬದ್ಧವಾಗಿ ಹಸ್ತಾಂತರಿಸಿಕೊಡಲಾಯ್ತು.

ಸದ್ಯದಲ್ಲಿಯೇ, ಅಪ್ರಮೇಯ ಫಿಲಂಸ್‌ ಅವರ ಪ್ರೊಡಕ್ಷನ್‌ನಲ್ಲಿ “ಕೆಂದಾವರೆ” – ಎಂಬ ಇದೇ ಮಹಾ ಕಾದಂಬರಿಯ ಹೆಸರಿನ ಶೀರ್ಷಿಕೆಯಡೀಯಲ್ಲಿ ಕಾದಂಬರಿ ಆಧಾರಿತ ಕನ್ನಡ ಭಾಷೆಯ ಹೊಸ ಚಲನಚಿತ್ರವೊಂದು ನಿರ್ಮಾಣವಾಗಿದ್ದು ಅತೀ ಶೀಘ್ರದಲ್ಲಿಯೇ ಅದನ್ನು ಬೆಳ್ಳಿತೆರೆ ಮೇಲೆ ತರಲು ಕೆಲಸಗಳು ಪ್ರಗತಿಯಲ್ಲಿವೆ.

Exit mobile version