Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ, ಸದಸ್ಯರಿಗೆ ಶೇ.13 ಡಿವಿಡೆಂಡ್ ಘೋಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.19:
ಇಲ್ಲಿನ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆಯು ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಇಂದು ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಜಗದೀಶ ಪೂಜಾರಿ ಅವರು ಮಾತನಾಡಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಹಿಂದಿನ ಸಾಲಿನಲ್ಲಿ ರೂ. 1.10 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 13 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘವು ಹಿಂದಿನ ಸಾಲಿನಲ್ಲಿ ರೂ 73.95 ಕೋಟಿ ಠೇವಣಿ ಹೊಂದಿ, ಸದಸ್ಯರಿಗೆ ರೂ. 48.52 ಕೋಟಿ ಸಾಲ ನೀಡಿದೆ ಎಂದರು.

ಸಂಸ್ಥೆಯ ನಿರಂತರವಾಗಿ ಪ್ರಗತಿಯ ಪಥದಲ್ಲಿದ್ದು ಸದಸ್ಯರಿಗೂ ಬಡ್ಡಿಯಲ್ಲಿ ಕಡಿತ, ಕೃಷಿ ಹಾಗೂ ಹೈನುಗಾರಿಕೆಗೆ ಸಾಲ ನೀಡಿ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಸತೀಶ್‌ ಕುಮಾರ್‌ ಶೆಟ್ಟಿ, ನಿರ್ದೆಶಕರುಗಳಾದ ನರಸಿಂಹ ದೇವಾಡಿಗ, ಗಣೇಶ ಪೂಜಾರಿ, ಶ್ರೀನಿವಾಸ ಪೂಜಾರಿ, , ಹರಿಶ್ಚಂದ್ರ ಆಚಾರ್ಯ, ಪ್ರಭಾಕರ ಎಂ. ಖಾರ್ವಿ, ಗಣೇಶ ಕೆ. ಪೂಜಾರಿ, ವೀರೇಂದ್ರ ಹೆಗ್ಡೆ, ರಾಮ ಕಂತಿಹೊಂಡ, ಸುರೇಶ ನಾಯ್ಕ, ಲಕ್ಷ್ಮೀ, ಶಕುಂತಳಾ, ನಾಮ ನಿರ್ದೆಶಕರಾದ ಎಂ. ಅಣ್ಣಪ್ಪ ಬಿಲ್ಲವ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಶಿವರಾಮ್‌ ಉಪಸ್ಥಿತರಿದ್ದರು.

ಈ ಸಂದರ್ಭ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಕೀರ್ತನ್‌ ಎಂ. ಶೆಟ್ಟಿ, ಪ್ರಗತಿಪರ ಕೃಷಿಕ ಅಶೋಕ್‌ ಶೆಟ್ಟಿ, ಸೇವಾ ನಿವೃತ್ತಿ ಹೊಂದಿದ ಮರವಂತೆ ಶಾಖಾ ವ್ಯವಸ್ಥಾಪಕ ಸೋಮಯ್ಯ ಬಿಲ್ಲವ ಅವರನ್ನು ಸನ್ಮಾನಿಸಲಾಯಿತು.

ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ವ್ಯಾಪ್ತಿಯ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ, ಇಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು.

ಸಂಘದ ಸದಸ್ಯರು ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ವರದಿ, ಆಯವ್ಯಯ ವಿವರ ನೀಡಿದರು. ಶಿಕ್ಷಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version