ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಸ್ರೂರು ಗ್ರಾಮದ ಬಸ್ಟಾಂಡ್ ನಿಲ್ದಾಣದ ಸಮೀಪ ಬೃಹತ್ ಶಿಲಾಯುಗದ ನಿಲಿಸುಗಲ್ಲು ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಪ್ರೋ. ಟಿ.ಮುರುಗೇಶ ಮಾಹಿತಿ ನೀಡಿದ್ದಾರೆ.
ಸಾಮಾನ್ಯ ಶಕ ಪೂರ್ವ ವರ್ಷ (ಕ್ರಿ.ಪೂ)1 ಸಾಮಾನ್ಯ ಶಕ. ವರ್ಷ(ಕ್ರಿ.ಶ) ರಿಂದ. 1 ರ ಅಂದರೆ ಸರಿ ಸುಮಾರು ಎರಡು ಸಾವಿರ ವರ್ಷದ ಪ್ರಾಚೀನವಾದ ನಿಲಿಸು ಗಲ್ಲು ಪತ್ತೆಯಾಗಿದೆ.
ಅಳತೆ:
ಮಣ್ಣಿನ ಮೇಲ್ಭಾಗದ ಎತ್ತರ 4.51 ಅಡಿ ಅಂದರೆ 130cm, ಮೇಲ್ಭಾಗದ ದಪ್ಪ 20 cm ಹಾಗೂ ಮಧ್ಯಭಾಗದ ದಪ್ಪ 40 cm ಕಲ್ಲು ತ್ರಿಕೋನ ಶೈಲಿಯಲ್ಲಿ ಕಂಡು ಬಂದಿದೆ.
ನಿಲಿಸುಗಲ್ಲು:
ಇತಿಹಾಸದಲ್ಲಿ ಸಮಾಧಿಯ ಸ್ಥಳದಲ್ಲಿ ನೆನಪಿನ ಕಲ್ಲುಗಳನ್ನು ಹಾಕಲಾಗುತ್ತಿದ್ದರು. ಬೃಹತ್ ಶಿಲಾಯುಗದ ಸಮಾಧಿ ಸ್ಥಳದಲ್ಲಿ ಸಮಾಧಿಯ ಸಂಕೇತವಾಗಿ ಈ ರೀತಿಯ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು. ಆ ಕಲ್ಲುಗಳಿಗೆ ನಿಲಿಸುಗಲ್ಲು ಅಧವಾ ಮೆನ್ಹಿರ್ ಎಂದು ಕರೆಯುತ್ತಾರೆ.

ಡಾ. ಪಿ.ಗುರುರಾಜ್ ಭಟ್ ಅವರ ಸ್ಟಡಿ ಆಫ್ ತುಳುವ ಹಿಸ್ಟರಿಯಲ್ಲಿ ಬಸ್ರೂರು ಸರಕಾರಿ ಪ್ರೌಢ ಶಾಲೆಯ ಆಟದ ಮೈದಾನದಲ್ಲಿದ್ದ ಬಂಡೆ ಕಲ್ಲು ಶಿಲ್ಪವಿರುವುದರ ಬಗ್ಗೆ ಮಾಹಿತಿ ನೀಡಿದ್ದರು. ಕಳೆದ ನಾಲ್ಕೈದು ವರ್ಷದ ಹಿಂದೆ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಬೃಹತ್ ಶಿಲಾಯುಗದ ನಿಲಿಸುಗಲ್ಲು ಇರುವ ಬಗ್ಗೆ ಬೆಳಕಿಗೆ ಚೆಲ್ಲಿದ್ದು, ಇದೀಗ ಎರಡನೇ ನಿಲಿಸುಗಲ್ಲು ಪತ್ತೆಯಾಗಿದೆ.
ಸರಿ ಸುಮಾರು ಐದು ಅಡಿ ಉದ್ದ ಇರುವ ಈ ಕಲ್ಲು ಕಾಂಪೌಂಡ್ ಗೆ ತಾಗಿಕೊಂಡಿದ್ದು , ಕೆಳ ಭಾಗ ದಪ್ಪವಾಗಿದ್ದು ಮೇಲ್ಭಾಗ ಸ್ವಲ್ಪ ಸಪೂರವಾಗಿ ಕಂಡುಬಂದಿದೆ.
ನಿಲಿಸುಗಲ್ಲುಗಳನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಜಿಲ್ಲಾ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದುವರಿಗೆ ಮಾರ್ಗದರ್ಶನವನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಆರ್., ನಿವೃತ್ತ ಟಿ. ಮುರುಗೇಶ್,ಕೆ.ಬಿ. ಶಿವತಾರಕ, ಧನಪಾಲ್ (ಕರ್ನಾಟಕ ಇತಿಹಾಸ ಅಕಾಡೆಮಿ ಕಾರ್ಯಕಾರಿಣಿ ಸದಸ್ಯರು), ಶ್ರೇಯಾಸ್ ಭಟ್ ಹಾಗೂ ಗೌತಮ್ ಹಾಗೂ ಕವಿತಾ ಆಚಾರ್ಯ ಮುದೂರು ಸಹಕಾರದಲ್ಲಿ ಪತ್ತೆ ಹಚ್ಚಲಾಗಿದೆ.
ಬಸರೂರು/ಬಸ್ರೂರು/ ಬಸುರೆಪಟ್ಟಣ ಎಂದು ಚಾರಿತ್ರಿಕವಾಗಿ ಗುರುತಿಸಲ್ಪಟ್ಟಿರುವ ಇಂದಿನ ಬಸ್ರೂರು ಕುಂದಾಪುರ ನಗರದ ದು ಒಂದು ಭಾಗ. ಆದರೆ, ಪ್ರಾಚೀನ ತುಳುನಾಡಿನ ಬಂದರು ನಗರ, ವಾಣಿಜ್ಯ ಕೇಂದ್ರ. ಈ ನಗರದ ಕೋಟಿ ಆಂಜನೇಯ ದೇವಾಲಯದ ಬಳಿ, ಬೃಹತ್ ಶಿಲಾಯುಗದ ನಿಲ್ಸ್ ಕಲ್ ಪತ್ತೆಯಾಗಿತ್ತು. ಈಗ, ಇದೇ ಬಸ್ರೂರಿನಲ್ಲಿ ಮತ್ತೊಂದು ಬೃಹತ್ ಶಿಲಾಯುಗದ ನಿಲ್ಸ್ ಕಲ್ ಪತ್ತೆಯಾಗಿದೆ. ಸುಮಾರು 5 ಅಡಿ ಎತ್ತರದ ಈ ನಿಲುವುಗಲ್ಲು, ಪಶ್ಚಿಮೋತ್ತರವಾಗಿ ಮುಖಮಾಡಿದೆ. ಸ್ಥಳೀಯ ನೀಸ್ ಅಥವಾ ಪಾಂಡುಕಲ್ಲನ್ನು ಈ ಸಮಾಧಿ ರಚನೆ ಬಳಸಲಾಗಿದೆ. ಆದ್ದರಿಂದ ಇದು ಸರಿ ಸುಮಾರು ಸಾಮಾನ್ಯ ಶಕ ಪೂರ್ವ(ಕ್ರಿ.ಪೂ) 1 ಅಥವಾ ಸಾಮನ್ಯ ಶಕ(ಕ್ರಿ.ಶಕ )1ನೇ ಶತಮಾನದ ರಚನೆ ಆಗಿರಬಹುದು. – ಪ್ರೋ. ಟಿ. ಮುರುಗೇಶ, ಇತಿಹಾಸ ವಿದ್ವಾಂಸರು, ಸ್ಥಾಪಕ ಸದಸ್ಯ ಉಡುಪಿ ಆದಿಮ ಕಲಾ ಟ್ರಸ್ಟ್ ರಿ.