Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಕರ್ನಾಟಕ ತಂಡಕ್ಕೆ ಪ್ರಥಮ ಸ್ಥಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರ ಸ್ಪರ್ಧೆಗಳ ಅಂಗವಾಗಿ ದಿನಾಂಕ ಹೆರಿಟೇಜ್ ಸ್ಕೂಲ್ ವೆಸ್ಟ್ ಬಂಗಾಲ ಇವರ ಪ್ರಾಯೋಜಕತ್ವದಲ್ಲಿ ಈಷ್ಟ್ ಕೊಲ್ಕತ್ತಾ ಟೌನ್ ಶಿಪ್ ಕೊಲ್ಕತ್ತಾ ವೆಸ್ಟ್ ಬಂಗಾಲದಲ್ಲಿ ನಡೆದ ರಾಷ್ಟ್ರಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಕರ್ನಾಟಕ ಗೋವಾ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಈ ತಂಡದಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರಾದ ಅನುಷ್ಕಾ ಉದಯ ಹುರುಳಿ ಮತ್ತು ಖುಷಿ ಬಿ.ಟಿ ಒಳಗೊಂಡಿದ್ದು, ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಅನುಷ್ಕಾ ಉದಯ ಹುರುಳಿಯು ಸೌದತ್ತಿಯ ನಿವಾಸಿಗಳಾದ ಜ್ಯೋತಿ ಮತ್ತು ಉದಯ ಹುರುಳಿ ದಂಪತಿಗಳ ಸುಪುತ್ರಿಯಾಗಿದ್ದಾಳೆ. ಖುಷಿ ಬಿ.ಟಿ. ಯು ಬೆಳಗಾಂ ನಿವಾಸಿಗಳಾದ ಅಕ್ಕಮ್ಮ ಮತ್ತು ಬರಮಪ್ಪ ತೇಲಿ ದಂಪತಿಗಳ ಸುಪುತ್ರಿಯಾಗಿದ್ದಾಳೆ.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿ ಪ್ರೋತ್ಸಾಹಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರನ್ನೂ, ಅಭಿನಂದನೆ ಸಲ್ಲಿಸಿ ಮಾತನಾಡಿ,  ಸ್ಪರ್ಧೆಗಳನ್ನು ಆರಂಭಿಸಿದಾಗ ನಾವು ಕ್ರಿಯಾತ್ಮಕವಾಗಿ ಸ್ಪಂದಿಸಿರುವುದು ಈಗ ಹೆಮ್ಮೆಯನ್ನುಂಟು ಮಾಡುತ್ತಿದೆ. ಐಸಿಎಸ್‌ಸಿ ಶಾಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮಾತ್ರ ತೊಡಗಿರುತ್ತಾರೆಂಬ ಅಪವಾದವನ್ನು ಪೂರ್ಣವಾಗಿ ನಮ್ಮ ವಿದ್ಯಾರ್ಥಿಗಳು ದೂರಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

Exit mobile version