ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಆತಿಥ್ಯದಲ್ಲಿ ನಡೆದ 3 ದಿನಗಳ ಮೈಸೂರು ವಿಭಾಗ ಮಟ್ಟದ ಅಂಡರ್ 14/17 ಬಾಲಕ ಬಾಲಕಿಯರ ಕ್ರಿಕೆಟ್ ಪಂದ್ಯಾಟದಲ್ಲಿ ಅಂಡರ್ 17 ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆಯ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಕೊಡಗು ಮತ್ತು ಉಡುಪಿ ಇವುಗಳ ನಡುವಿನ ನಡೆದ ಹಣಾಹಣಿ ಪಂದ್ಯಾಟದಲ್ಲಿ ಉಡುಪಿ ಬಾಲಕಿಯರ ತಂಡ ವಿಜಯ ಸಾಧಿಸಿತು. ಅಂಡರ್ 17 ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ವರ್ಸಸ್ ಉಡುಪಿ ಇವುಗಳ ನಡುವಿನ ನಡೆದ ರೋಚಕ ಪಂದ್ಯಾಟದಲ್ಲಿ ಉಡುಪಿ ತಂಡವು ವಿಜಯ ಸಾಧಿಸಿತು.
ಅಂಡರ್ 14 ಬಾಲಕರ ವಿಭಾಗದಲ್ಲಿ ಹಾಸನ ವರ್ಸಸ್ ಮೈಸೂರು ಇವುಗಳ ನಡುವೆ ನಡೆದ ರೋಚಕವಾದ ಪಂದ್ಯಾಟದಲ್ಲಿ ಮೈಸೂರು ತಂಡವು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.