Site icon Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಿ. ಎ. ಮತ್ತು ಸಿ. ಎಸ್. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಿ. ಎ. ಮತ್ತು ಸಿ. ಎಸ್. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಶಿಕ್ಷಾಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಇದರ ಸಹ ಸಂಸ್ಥಾಪಕರಾದ ಪ್ರತಾಪ ಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಸಿ. ಎ. ಸ್ವಸ್ಥಿಕ್, ಸಿ. ಎ. ವೖಷ್ಣವಿ ಮತ್ತು ಸಿ. ಎ. ಭರತೇಶ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಿ. ಎ. ಸ್ವಸ್ತಿಕ್  ಮತ್ತು ಸಿ. ಎ. ವೖಷ್ಣವಿ ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಅರುಣ್ ಎ. ಎಸ್., ವಾಣಿಜ್ಯ ಸಂಘದ ಸಂಯೋಜಕರಾದ ಮಮತಾ, ಕಾರ್ಯಕ್ರಮದ  ಉಪನ್ಯಾಸಕ ಸಂಯೋಜಕರಾದ ಸುಮಾ ಮತ್ತು ರಿತಿನ್. ಎಸ್.  ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಭೂಮಿಕಾ ಕಾರ್ಯಕ್ರಮ ನಿರೂಪಿಸಿ, ದ್ರುವ ಸ್ವಾಗತಿಸಿ, ಸುಜನ್  ವಂದಿಸಿದರು.

Exit mobile version