Kundapra.com ಕುಂದಾಪ್ರ ಡಾಟ್ ಕಾಂ

ಎಸ್‌ಸಿಡಿಸಿಸಿ ಬ್ಯಾಂಕ್ ಉಪ್ಪುಂದ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಉಪ್ಪುಂದ ಶಾಖೆಯಿಂದ ನಬಾರ್ಡ್ ಸಹಯೋಗದೊಂದಿಗೆ ಉಪ್ಪುಂದದ ನಾಡದೋಣಿ ಸಭಾಭವನಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ – ಸಹಕಾರಿ ಸಾಕ್ಷರತಾ ಶಿಬಿರ ಸೋಮವಾರ ಆಯೋಜಿಸಲಾಗಿತ್ತು.

ನಬಾರ್ಡ್ ಮಂಗಳೂರಿನ ಡಿಸ್ಟಿಕ್ಟ್ ಡೆಪ್ಯೂಟಿ ಮ್ಯಾನೇಜರ್ ಸಂಗೀತಾ ಕರ್ತಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಿನಿಯರ್ ಬ್ರಾಂಚ್ ಇನ್ಸಪೆಕ್ಟರ್ ರವೀಂದ್ರ ಭಟ್, ಕೇಂದ್ರ ಕಛೇರಿ ಪಿಸಿಬಿ ವಿಭಾಗದ ಸಿ. ಶಂಭುಲಿಂಗ್, ಸಿ. ಸಂದೀಪ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ, ‌ಮಣಿಪಾಲ ಆಸ್ಪತ್ರೆಯ ಡಿಪಾರ್ಟ್ಮೆಂಟ್ ಆಫ್‌ ನ್ಯೂಟ್ರಿಷನ್ ಅಂಡ್ ಡಯಟಿಕ್ಸ್ ವಿಭಾಗದ ಡಾ. ಅನುಷಾ, ಕೆನರಾ ಬ್ಯಾಂಕ್ ಫೈನಾನ್ಸಿಯಲ್ ಲಿಟರೆಸಿ ಕೌನ್ಸಿಲರ್ ಆಶಾಲತಾ, ಎನರ್ಜಿ ಸೋಲಾರ್‌ನ ಲಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.

ಆರ್ಥಿಕ ಸಾಕ್ಷರತೆ ಬಗ್ಗೆ ಆಶಾಲತಾ ಮಾಹಿತಿ ನೀಡಿದರು. ಆರೋಗ್ಯಪೂರ್ಣ ಆಹಾರ ಕ್ರಮದ ಬಗ್ಗೆ ಡಾ. ಅನುಷಾ ಮತ್ತು ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಹಾಗೂ ಸೌರ ವಿದ್ಯುತ್‌ ಉಪಯೋಗಗಳ ಬಗ್ಗೆ ಲಿಂಗಯ್ಯ ಮಾಹಿತಿ ನೀಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಉಪ್ಪುಂದ ಶಾಖಾ ವ್ಯವಸ್ಥಾಪಕ ಜಿ. ಶಂಕರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವೋದಯ ಸ್ವಸಹಾಯ ಸಂಘದ ಸದಸ್ಯೆ ಪೂರ್ಣಿಮಾ ಪ್ರಾರ್ಥಿಸಿದರು. ಸಂಘಗಳ ವಲಯ ನಿರೀಕ್ಷಕರಾದ ಶಿವರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಸಿಬ್ಬಂದಿ ಗೋಪಾಲ ಪೂಜಾರಿ ವಂದಿಸಿದರು.

Exit mobile version