Site icon Kundapra.com ಕುಂದಾಪ್ರ ಡಾಟ್ ಕಾಂ

ಜ್ಯುವೆಲ್ಲರಿ ಶಾಪ್‌ನಿಂದ ಚಿನ್ನ ಖರೀದಿಸಿ ಹಣ ಕೊಡದೆ ವಂಚನೆ, ಆರೋಪಿ ಬಂಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಅಮಾಸೆಬೈಲು:
ಜ್ಯುವೆಲ್ಲರಿ ಶಾಪ್‌ನಿಂದ ಚಿನ್ನ ಖರೀದಿಸಿ ಹಣ ಕೊಡದೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಬಂಧಿತ ಆರೋಪಿ.

ಹೊಸಂಗಡಿಯ ಶ್ರೀಕೃಷ್ಣ ಜ್ಯುವೆಲ್ಲರಿಯಿಂದ 2024ರ ನ.3ರಂದು ಸಂತೋಷ ಎಂದು ಹೆಸರು ಹೇಳಿಕೊಂಡು ಕಾರಿನಲ್ಲಿ ಬಂದ ವ್ಯಕ್ತಿ ಗಿಪ್ಟ್ ಕೊಡುವ ಬಗ್ಗೆ 30 ಸಾವಿರ ರೂ. ಮೌಲ್ಯದ 2 ಚಿನ್ನದ ಉಂಗುರಗಳನ್ನು ಖರೀದಿ ಮಾಡಿದ್ದನು. ಹಣವನ್ನು ನೆಫ್ಟ್ ಮೂಲಕ ಹಾಕಿರುವುದಾಗಿ ಮೊಬೈಲ್ ಪೋನ್ ತೋರಿಸಿ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದನು.

ಆದರೆ ಹಣ ಖಾತೆಗೆ ಜಮಾ ಆಗದ ಬಗ್ಗೆ ಆತನಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದು, ಆತ ನಾಳೆ ಕೊಡುವುದಾಗಿ ಹೇಳಿ ವಂಚಿಸಿದ್ದನು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿ ಪ್ರವೀಣ್ ಎಂಬಾತನನ್ನು ಸೆ.29ರಂದು ಬಂಧಿಸಿ, ಕಾರು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Exit mobile version