ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ರಾಮಕ್ಷತ್ರಿಯ ಯುವಕ ಸಮಾಜ ಶ್ರೀ ಸೀತಾರಾಮಚಂದ್ರ ದೇವಸ್ಥಾನದ 39ನೇ ವರ್ಷದ ಶಾರದೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ವೈಭವ ಸ್ಪರ್ಧೆಯಲ್ಲಿ ಪಡುವರಿಯ ಸೋಮೇಶ್ವರ ತಂಡವು ನಟಿಸಿದ ಕ್ಷಾತ್ರತೇಜ ನಾಟಕ ಪ್ರಥಮ ಸ್ಥಾನ ಗಳಿಸಿತು.

ಬಹುಮಾನವನ್ನು ಬೈಂದೂರು ರಾಮಕ್ಷತ್ರಿಯ ಸಮಾಜ ಇದರ ಅಧ್ಯಕ್ಷರಾದ ರಾಮಕೃಷ್ಣ ಸಿ., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಬಟವಾಡಿ, ಯುವಕ ಸಮಾಜದ ಗೌರವಾಧ್ಯಕ್ಷ ರವೀಂದ್ರಸೋಡಿ ತಾರ್, ಅಧ್ಯಕ್ಷರಾದ ರಾಜಶೇಖರ ರೊಕ್ಕನ್, ಗೌರವ ಕಾರ್ಯದರ್ಶಿ ಅಶೋಕ ಕೆ. ಕಾರ್ಯದರ್ಶಿ ಕೌಶಿಕ್ ಜಿಕೆ., ತಂಡದ ವ್ಯವಸ್ಥಾಪಕರಾದ ಹಾಗೂ ಮಾತ್ರ ಮಂಡಳಿಯ ಅಧ್ಯಕ್ಷರಾದ ಗಾಯತ್ರಿ ರಾಮ ಸೋಡಿತಾರ್ ಮತ್ತು ತಂಡಕ್ಕೆ ವಿತರಿಸಿದರು.
ನಾಟಕ ಪರಿಕಲ್ಪನೆ ಮತ್ತು ನಿರ್ದೇಶನ ಗಣಪತಿ ಹೋಬಳಿದಾರ್ ಮಾಡಿದ್ದರು.