Site icon Kundapra.com ಕುಂದಾಪ್ರ ಡಾಟ್ ಕಾಂ

ಮದುವೆಯಾಗಲು ನೋಟಿನಲ್ಲಿ ದೇವರ ಅನುಮತಿ ಬೇಡಿದ ಭೂಪ!

ಪ್ರೀತಿಯ ಅಮಲ ಏರಿದರೇ ಅವರ ನಡೆ-ನುಡಿಗಳ ಅಂಕೆಯಲ್ಲಿರುವುದಿಲ್ಲ ಎಂಬುದನ್ನು ಸಾಕಷ್ಟು ಪ್ರಕರಣಗಳು ಸಾಕ್ಷೀಕರಿಸಿವೆ. ಎದೆಯ ಮೇಲೆ ಟ್ಯಾಟೋ ಹಾಕಿಸಿಕೊಳ್ಳುವುದು, ಕೈಯಲ್ಲಿ ಬ್ಲೇಡಿನಿಂದ ಬರೆದುಕೊಳ್ಳುವುದು, ರಕ್ತದಲ್ಲಿ ಪ್ರೇಮಪತ್ರ ಬರೆದು ಪ್ರೇಮ ಪರಾಕಾಷ್ಟೆ ತೋರಿಸುವುದು ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ನೂರು ರೂಪಾಯಿ ನೋಟಿನ ಮೇಲೆ ತನ್ನ ಪ್ರಿಯತಮೆಯನ್ನು ಮದುವೆಯಾಗಲು ಅನುಮತಿ ಕೋಡಿ ಎಂದು ಬರೆದುಕೊಂಡು ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಬೇಡಿದ್ದಾನೆ. ಅಷ್ಟೇ ಅಲ್ಲದೇ ಈ ನೋಟು ಸಿಕ್ಕಿದವರು ನಮಗೆ ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾನೆ. ದೇವರು ಆಶಿರ್ವಾದ ಮಾಡಿದರೋ ಇಲ್ಲವೋ ಗೊತ್ತಿಲ್ಲ. ಅಷ್ಟಕ್ಕೂ ಅದು ಕಾಣಿಕೆ ಹುಂಡಿಗೆ ಹೋಗಿ ಬಂದ ನೋಟೋ ಅಥವಾ ತಮಾಷೆಗಾಗಿ ಯಾರೋ ಬರೆದದ್ದೋ ಗೊತ್ತಿಲ್ಲ ಆದರೆ ಪಿಗ್ಮಿ ಸಂಗ್ರಾಹಕರೊಬ್ಬರು ಈ ನೋಟನ್ನು ‘ಕುಂದಾಪ್ರ ಡಾಟ್ ಕಾಂ’ಗೆ ನೀಡಿದ್ದಾರೆ. ಅದೇನೇ ಇದ್ದರೂ ಸಹ ಭಾರತೀಯ ರಿಸರ್ವ ಬ್ಯಾಂಕಿನ ಚಲಾವಣೆಯಲ್ಲಿರುವ ನೋಟಿನ ಮೇಲೆ ಈ ರೀತಿ ಬರೆಯುವುದು ತಪ್ಪು ಎಂದು ತಿಳಿದಿದ್ದರೂ ಪ್ರೀತಿಯ ಅಮಲು ಹಾಗೆ ಮಾಡಿಸಿರಬೇಕು ಎಂದು ನೋಟು ಸಿಕ್ಕವರು ಹೇಳಿಕೊಂಡಿರಬಹುದು

Exit mobile version