Site icon Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಚಂಡಿಕಾ ಹವನ ಸೇವೆ ಸಂಪನ್ನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಾಲಯದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಚಂಡಿಕಾ ಹವನ ಸೇವೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ನಡೆಯಿತು.

ಮಧ್ಯಾಹ್ನ ಯಾಗದ ಪೂರ್ಣಹುತಿ, ಮಧ್ಯಾಹ್ನ ಪೂಜೆ, ದೇವಿಗೆ ಬಂದ ಹರಕೆಯ ಸೀರೆಗಳ ಏಲಂ, ಮಹಾಸಮಾರಾಧನೆ ಸೇವೆ, ಸಂಜೆ ರಜತ ಪಲ್ಲಕ್ಕಿ ಉತ್ಸವ, ಭಜನಾ ಕಾರ್ಯಕ್ರಮ ಮೊದಲಾದ ಧಾರ್ಮಿಕ ಸಂಪನ್ನಗೊಂಡಿತು.

ದೇವಸ್ಥಾನದ ಅರ್ಚಕರು, ಪುರೋಹಿತರು, ಆಡಳಿತ ಧರ್ಮದರ್ಶಿ ಮಂಡಳಿ ಸದಸ್ಯರು, ಸಮಾಜಬಾಂಧವರು, ಕುಳಾವಿ ಭಜಕರು, ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version