Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಶ್ರೀ ನಾರಾಯಣ ಗುರು ಜನಸೇವಾ ಬಳಗ ಸಮಿತಿ ರಚನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗದ ಅಧ್ಯಕ್ಷರಾಗಿ ಜಿ. ಗೋಪಾಲ ಪೂಜಾರಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಉದ್ಘಾಟನಾ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ  ಅವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ  ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಗೋಪಾಲ ಚಂದನ್, ಉಪಾಧ್ಯಕ್ಷರಾಗಿ ಸುಜಾತ  ಕಾಂತು, ಬಾಬು ಖಾರ್ವಿ ಮತ್ತು ಮಮತಾ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷೇಂದ್ರ ಆಚಾರ್ಯ, ಕಾರ್ಯದರ್ಶಿಯಾಗಿ ಕಾರ್ತಿಕ್ ಬಿ. ಖಾರ್ವಿ, ಜೊತೆ ಕಾರ್ಯದರ್ಶಿಗಳಾದ ಮಹೇಶ್ ಶೇಟ್ ಮತ್ತು ರಾಘವೇಂದ್ರ ಬಿ., ಕೋಶಾಧಿಕಾರಿಗಳಾಗಿ ನರೇಂದ್ರ ಎಸ್. ಗಂಗೊಳ್ಳಿ, ಸಂಘಟನಾ ಕಾರ್ಯದರ್ಶಿ ಆನಂದ ಬಿಲ್ಲವ, ಕ್ರೀಡಾ ಕಾರ್ಯದರ್ಶಿ ಶರಣ್ ಪೂಜಾರಿ, ಜೊತೆ ಕ್ರೀಡಾ ಕಾರ್ಯದರ್ಶಿಗಳಾದ ಗಣೇಶ್ ಪಡಿಯಾರ್ ಮತ್ತು ನಾಗಭೂಷಣ್ ಶೇಟ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಎನ್. ಡಿ., ಲೆಕ್ಕಪರಿಶೋಧಕರಾಗಿ ದೀಕ್ಷಿತ್ ಮೇಸ್ತ, ಸಲಹೆಗಾರರಾಗಿ ಡಾ. ವೀಣಾ ಕಾರಂತ್, ಸದಸ್ಯರಾಗಿ ರಘುನಾಥ ಪೂಜಾರಿ, ಶೈಲಜಾ ಪೂಜಾರಿ, ವಿನೋದಾ ದೇವಾಡಿಗ, ನಿತ್ಯಾನಂದ ದೇವಾಡಿಗ, ಸಂದೇಶ್, ವೈಷ್ಣವಿ ಗೋಪಾಲ್, ವಿಜಯ ಖಾರ್ವಿ, ಈಶ್ವರ್ ಗಂಗೊಳ್ಳಿ ಮತ್ತು ಅಭಿಷೇಕ್ ಗಾಣಿಗ ಆಯ್ಕೆಯಾಗಿದ್ದಾರೆ.

Exit mobile version