Site icon Kundapra.com ಕುಂದಾಪ್ರ ಡಾಟ್ ಕಾಂ

ಎನ್ಎಸ್ಎಸ್ ಯೋಜನಾಧಿಕಾರಿ ಸುಗುಣ ಆರ್‌.ಕೆ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಒಬ್ಬರು ಮಾಡುವ ಉತ್ತಮ ಕೆಲಸಗಳನ್ನು ಗುರುತಿಸಿ ಗೌರವಿಸಿದಾಗ ಅದು ಹೆಚ್ಚಿನ ಆತ್ಮ ಸಂತೋಷವನ್ನು ಇಬ್ಬರಿಗೂ ತಂದು ಕೊಡುತ್ತದೆ. ಇಂತಹ ಮೌಲ್ಯಗಳನ್ನು ನಾವು  ನಿರಂತರವಾಗಿ ಕಾಪಾಡಿಕೊಳ್ಳಬೇಕು ಎಂದು ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅಭಿಪ್ರಾಯಪಟ್ಟರು.

ಅವರು ತ್ರಾಸಿಯ ಮಿಲೆನಿಯಂ ಹಾಲ್‌ನಲ್ಲಿ ನಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಇಲ್ಲಿನ ಯೋಜನಾಧಿಕಾರಿಯದ ಸುಗುಣ ಆರ್.ಕೆ ಅವರಿಗೆ ಎನ್ಎಸ್ಎಸ್ ಶಿಬಿರದ ಪ್ರಾಕ್ತನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಹಲವು ವರ್ಷಗಳ ಕಾಲ ವಾರ್ಷಿಕ ವಿಶೇಷ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅರ್ಥಶಾಸ್ತ್ರ ಉಪನ್ಯಾಸಕಿಯಾದ ಸುಗುಣ ಆರ್.ಕೆ ಅವರನ್ನು ವಿಶೇಷವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.   

ವಿಕಾಸ್, ದೇವಿ ಪ್ರಸಾದ್, ಸೃಜನ್, ಪ್ರೀತಂ, ಜಯಶ್ರೀ, ಪ್ರಜ್ಞಾ, ಸುಕ್ಷಿತ, ವಿಜೇತ, ಶಿವಾನಿ, ವೆಲಿಟಾ, ದೀಪ್ತಿ, ಸನ್ನಿಧಿ ಮತ್ತು ಶ್ರೇಯ ಉಪಸ್ಥಿತರಿದ್ದರು.

ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅಕ್ಷಯ ಖಾರ್ವಿ ಶುಭ ಹಾರೈಸಿದರು. ಭಾರತಿ ನಿರೂಪಿಸಿ, ಸುಜನ್ ಖಾರ್ವಿ ಸ್ವಾಗತಿಸಿ, ಪ್ರಜ್ವಲ್ ಧನ್ಯವಾದ ಸಮರ್ಪಿಸಿದರು.

Exit mobile version