ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಎಚ್‌ಐವಿ ಏಡ್ಸ್ ಜಾಗೃತಿ ಅಭಿಯಾನದ ಅಂಗವಾಗಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಫ್ಲ್ಯಾಶ್ ಮಾಬ್ ಮತ್ತು ಬೀದಿ ನಾಟಕವನ್ನು ನಡೆಸಿದರು.
ಉಡುಪಿ ಜಿಲ್ಲಾಡಳಿತ ಸ್ಥಳೀಯ ಆರೋಗ್ಯ ಇಲಾಖೆಗಳು, ಭಾರತೀಯ ರೆಡ್ ಕ್ರಾಸ್, ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಮತ್ತು ಸನ್ ರೈಸ ರೋಟರಿ ಕ್ಲಬ್ ಕುಂದಾಪುರ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ಐಸಿಟಿಸಿ ಜಾಗೃತಿಯನ್ನು ತೀವ್ರಗೊಳಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮದಲ್ಲಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಂದ್ರ ಮರಕಾಲ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾಕ್ಟರ್ ಪ್ರೇಮಾನಂದ ತಾಲೂಕು ಆರೋಗ್ಯ ಅಧಿಕಾರಿ, ಜಯಕರ ಶೆಟ್ಟಿ ಅಧ್ಯಕ್ಷರು ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಗುರುರಾಜ ರೋಟರಿ ಕ್ಲಬ್ ಸನ್ ರೈಸ್ ಕುಂದಾಪುರ, ಡಾಕ್ಟರ್ ಕರುಣ ಆರೋಗ್ಯ ಅಧಿಕಾರಿ ಎ ಆರ್ ಟಿ ಕುಂದಾಪುರ, ಪ್ರಾಂಶುಪಾಲರು ಜೆನಿಫರ್ ಫ್ರೀಡ ಮೆನೆಜೆಸ್ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರ, ಶ್ರೀಕಾಂತ್ ರಾವ್ ಸಹಾಯ ನಿಧಿ ಕ್ಲಬ್ ಕುಂದಾಪುರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು. ನಳಿನಾಕ್ಷಿ ಐಸಿಟಿಸಿ ಕೌನ್ಸಲರ್ ಕುಂದಾಪುರ ಅವರು ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಮಾಡಿದರು.