ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಎಸೆದ ಘಟನೆ ಖಂಡಿಸಿ ಭಾನುವಾರ ಸಂಜೆ ಸಹಬಾಳ್ವೆ ಸಂಘಟನೆ ಕುಂದಾಪುರ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಕ್ಯಾಥೋಲಿಕ್ ಒಕ್ಕೂಟ, ಸೌಹಾರ್ದ ಕರ್ನಾಟಕ ಕುಂದಾಪುರ, ಸಿಐಟಿಯು ಕುಂದಾಪುರ ಸಹಯೋಗದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಶೂ ಎಸೆದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆತನನ್ನು ಗಡೀಪಾರು ಮಾಡಬೇಕು. ದೇಶದ್ರೋಹದ ಷಡ್ಯಂತ್ರ ಪ್ರಕರಣ ದಾಖಲಿಸಬೇಕು. ಕೃತ್ಯದ ಹಿಂದಿರುವ ಷಡ್ಯಂತ್ರ ಬೇಧಿಸಬೇಕು ಎಂದು ಸಂಸ್ಥೆಗಳ ಮುಖಂಡರು ಆಗ್ರಹಿಸಿದರು.