Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಜೂಜಾಟದಲ್ಲಿ ತೊಡಗಿದ್ದ 4 ಮಂದಿಯ ಬಂಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಮದ್ದುಗುಡ್ಡೆ ಬಳಿ ಸಾರ್ವಜನಿಕರ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದವರನ್ನು  ಕುಂದಾಪುರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಠಾಣೆಯ ಉಪನಿರೀಕ್ಷಕರಾದ ನಂಜಾ ನಾಯ್ಕ್‌ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿಗಳಾದ ಮಿಥುನ ಖಾರ್ವಿ, ಚಂದ್ರ ಪೂಜಾರಿ, ರೆಹಮತ್‌, ನಿರಂಜನ್‌ ನಾಯಕ್‌ ಎಂಬುವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಅಂದರ್ ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು 2,660 ರೂ, ಬಿಳಿ ಬಣ್ಣದ ಪಾಲೀಥಿನ್ ಚೀಲ, ಡೈಮಾನ್‌, ಆಟಿನ್‌, ಇಸ್ಪೀಟ್‌ ಕಳವಾರ್‌ ಚಿತ್ರಗಳಿರುವ 52 ಇಸ್ಪೀಟ್‌ ಎಲೆಗಳು ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version