Site icon Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕರಾಗಿ ಭೀಮೇಶ್‌ ಕುಮಾರ್‌ ಎಸ್.‌ ಜಿ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ. ಇದರ ನಿರ್ದೇಶಕರಾಗಿ ಬೈಂದೂರಿನ ಭೀಮೇಶ್‌ ಕುಮಾರ್‌ ಎಸ್.‌ ಜಿ ಆಯ್ಕೆಯಾಗಿದ್ದಾರೆ.

ಅವರು ಬೈಂದೂರಿನ ಕಾಮಾಕ್ಷಿ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭೀಮೇಶ್‌ ಅವರು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ಬೈಂದೂರಿನಲ್ಲಿ ಮಹಾವೀರ ಡೆವಲಪರ್ಸ್‌ ಮೂಲಕ ಮೊದಲ ಭಾರಿಗೆ ಮಹಾವೀರ ವಸತಿ ಸಮುಚ್ಛಯವನ್ನು ನಿರ್ಮಿಸಿದ್ದರು. ಇವರೊಂದಿಗೆ ಪುಣ್ಯಶ್ರೀ ಕನ್‌ಸ್ಟ್ರಕ್ಷನ್ಸ್‌ ಹಾಗೂ ಬನಶ್ರೀ ಪೆಟ್ರೋಲಿಯಂನ ಆಡಳಿತ ಪಾಲುದಾರರಾಗಿ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.

Exit mobile version