Kundapra.com ಕುಂದಾಪ್ರ ಡಾಟ್ ಕಾಂ

ಎಂಐಟಿಕೆ ತಾಂತ್ರಿಕ ಕಾರ್ಯಗಾರ ಮತ್ತು ಶೈಕ್ಷಣಿಕ ಒಡಂಬಡಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಮೂಡ್ಲಕಟ್ಟೆ  ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ವತಿಯಿಂದ ರೆಸ್ಟ್ ಕೊಡರ್ ಅಕಾಡೆಮಿಯ ಸಹಯೋಗದಲ್ಲಿ “ಎಂ.ಇ.ಆರ್.ಎನ್. ಸ್ಟಾಕ್ ” ವಿಷಯದ ಬಗ್ಗೆ ಎರಡು ದಿನದ ಕಾರ್ಯಾಗಾರ ಜರುಗಿತು.

ಸಂಪನ್ಮೂಲ ವ್ಯಕ್ತಿಯಾಗಿ   ರೆಸ್ಟ್ ಕೊಡರ್ ಅಕಾಡೆಮಿ, ಸೀನಿಯರ್ ಸಾಫ್ಟ್ ವೇರ್  ಡೆವೆಲಪರ್ ಸಯ್ಯದ್ ಇಮ್ರಾನ್ ಆಗಮಿಸಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಸಿದ್ದಾರ್ಥ ಜೆ. ಶೆಟ್ಟಿ , ಪ್ರಾಚಾರ್ಯರಾದ ಡಾ. ರಾಮಕೃಷ್ಣ ಹೆಗಡೆ, ವಿಭಾಗದ ಮುಖ್ಯಸ್ಥರಾದ ಮುರಳೀಧರ ಬಿ.ಕೆ., ಕಾರ್ಯಕ್ರಮದ ಸಂಚಾಲಕರಾದ ಡಾ. ಮಂಜುನಾಥ ಲಮಾಣಿ, ಪ್ಲೇಸ್ಮೆಂಟ್ ಡೀನ್ ಡಾ. ಅಣ್ಣಾಮಲೈ ಹಾಗು ಪ್ಲೇಸ್ಮೆಂಟ್ ಆಫೀಸರ್ ಪ್ರಸಾದ್ ಸಮ್ಮುಖದಲ್ಲಿ ಎಂಐಟಿಕೆ ರೆಸ್ಟ್ ಕೊಡರ್ ಅಕಾಡೆಮಿಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತು.

Exit mobile version