ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶಿರೂರು ಕೆಳಪೇಟೆಯಲ್ಲಿ ಆಟೋ ರಿಕ್ಷಾಕ್ಕೆ ಬೊಲೆರೋ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ರಿಒ್ಷಾ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಹಡವಿನಕೋಣೆ ನ್ಯೂ ಕಾಲೋನಿ ನಿವಾಸಿ ಕರಾ ಇಲಿಯಾಸ್(49) ಮೃತ ರಿಕ್ಷಾ ಚಾಲಕ
ಮಲ್ಪೆಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಮೀನಿನ ವಾಹನ ಶಿರೂರು ಮಾರ್ಕೆಟ್ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.ರಿಕ್ಷಾ ಡಿಕ್ಕಿಯಾದ ರಭಸಕ್ಕೆ ರಿಕ್ಷಾ ನಜ್ಜುನುಜ್ಜಾಗಿದ್ದು ರಿಕ್ಷಾ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

