Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಶ್ರೀರಾಮ ನಗರೋತ್ಸವ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ 550 ದಿನಗಳ ಶ್ರೀ ರಾಮನಾಮ ಜಪ ಅಭಿಯಾನದ ಅಂಗವಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಗಂಗಾರಾಮ: ಜಪ ಕೇಂದ್ರದಲ್ಲಿ ರಾಮನಾಮ ಜಪ ಅಭಿಯಾನ 550 ದಿನ ಪೂರ್ಣಗೊಂಡ ಹಿನ್ನಲೆಯಲ್ಲಿ ಶ್ರೀರಾಮ ನಗರೋತ್ಸವ ಸಮಾರಂಭ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶ್ರೀ ರಾಮ ನಾಮ ಮಹಾ ಜಪ ಅಭಿಯಾನ ನಡೆಯಿತು. ಮಧ್ಯಾಹ್ನ ಪೂಜೆ, ಸಮಾರಾಧನೆ, ಸಂಜೆ ಶ್ರೀರಾಮ ನಗರೋತ್ಸವ ನಡೆಯಿತು. ದೇವಸ್ಥಾನದಿಂದ ಹೊರಟ ದೇವರ ನಗರೋತ್ಸವ ಪುರಮೆರವಣಿಗೆ ಬಂದರು ಪೋರ್ಟ್ ಆಫೀಸಿನವರೆಗೆ ಸಾಗಿ ಮರಳಿ ಮುಖ್ಯರಸ್ತೆ ಮೂಲಕ ಎಸ್.ವಿ. ಜ್ಯೂನಿಯರ್ ಕಾಲೇಜಿವರೆಗೆ ತೆರಳಿ ದೇವಸ್ಥಾನದ ಬಳಿ ಸಮಾಪನಗೊಂಡಿತು. ರಾತ್ರಿ ದೇವರಿಗೆ ದೀಪಾರಾಧನೆ, ವಿಶೇಷ ಪೂಜೆ, 108 ರಾಮನಾಮ ಜಪ ಪಠಣ ನಡೆದು ಶ್ರೀ ರಾಮ ದೇವರಿಗೆ ಮಹಾಮಂಗಳಾರತಿ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೇವಸ್ಥಾನದ ತಾಂತ್ರಿಕ ಜಿ. ವಸಂತ ಭಟ್, ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ, ಜಿ. ಅನಂತಕೃಷ್ಣ ಭಟ್, ಜಿ. ವಿಠಲದಾಸ ಭಟ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಪುರೋಹಿತರು, ಜಪ ಸಮಿತಿ ಸದಸ್ಯರು, ಜಾಪಕರು, ಸಮಾಜಬಾಂಧವರು ಭಾಗವಹಿಸಿದ್ದರು.

Exit mobile version