Kundapra.com ಕುಂದಾಪ್ರ ಡಾಟ್ ಕಾಂ

ವಿವಿಧ ಪಕ್ಷಿ ಪ್ರಬೇಧ ಮಾಹಿತಿ ಕಾರ್ಯಗಾರ

ಕುಂದಾಪುರ: ಪ್ಲೋರಾ ಎಂಡ್ ಫೌನಾ ಕ್ಲಬ್ಬಿನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಇಕೋಕ್ಲಬ್‌ಗಳ ಸಮ್ಮೇಳನದಲ್ಲಿ ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾದ ವಿ.ಎಲ್. ಉಪಾಧ್ಯರು ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಛಾಯಾಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಪ್ರಭೇದದ ಪಕ್ಷಿಗಳ ವಿವರ ನೀಡಿದರು.

ಇದೇ ಸಮಾವೇಶದಲ್ಲಿ ಖ್ಯಾತಿ ಚಿತ್ರ ಕಲಾವಿದ ಬೋಜ ಹಾಂಡಾರವರ ಪಕ್ಷಿಗಳ ವರ್ಣಚಿತ್ರಗಳ ಪ್ರದರ್ಶನ ನಡೆಯಿತು. ಕ್ಲಬ್ಬಿನ ಉಪಾಧ್ಯಕ್ಷ ಪ್ರಶಾಂತ ತೋಳಾರ ಉಪಸ್ಥಿತರಿದ್ದರು. ಬಿ.ಇ.ಓ. ಶ್ರೀಮತಿ ಶೋಭಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಡಾ| ಭಾಸ್ಕರ ಆಚಾರ್ಯರು ಬಹುಮಾನ ವಿತರಿಸಿದರು.

Exit mobile version