Site icon Kundapra.com ಕುಂದಾಪ್ರ ಡಾಟ್ ಕಾಂ

ನಿರ್ಮಲ ಗ್ರಾಮ ಅಭಿಯಾನ ಮತ್ತು ಅಂಗದಾನದ ಅರಿವು ಕುರಿತ ಬೀದಿನಾಟಕ

ಬೈಂದೂರು: ಗೋಳಿಹೊಳೆ ಶ್ರೀ ಮಹಿಷಮರ್ಧಿನಿ ಸಭಾಂಗಣದಲ್ಲಿ ನಡೆಯುತ್ತಿರುವ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸ್ವಯಂಸೇವಕರು ನಿರ್ಮಲ ಗ್ರಾಮ ಅಭಿಯಾನ ಮತ್ತು ಅಂಗದಾನದ ಅರಿವು ಕುರಿತ ಬೀದಿನಾಟಕ ಪ್ರದರ್ಶಸಿದರು.

ಗೋಳಿಹೊಳೆ ಮೂರ್ಕೈಯಿಂದ ಅರೆಶಿರೂರು ಪೇಟೆವರೆಗೆ ನಡೆದ ನಿರ್ಮಲ ಗ್ರಾಮ ಅಭಿಯಾನ ಜಾಥಾಕ್ಕೆ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದ ಮೊಕ್ತೇಸರ ಶಿವರಾಜ ಪೂಜಾರಿ ಚಾಲನೆ ನೀಡಿದರು. ಅರೆಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎನ್‌ಎಸ್‌ಎಸ್ ಕಾರ್ಯಕರ್ತರು ಅಂಗದಾನದ ಕುರಿತ ಬೀದಿನಟಕ ಪ್ರದರ್ಶಿಸಿದರು.

ಈ ಸಂದರ್ಭ ರಘುರಾಮ ಶೆಟ್ಟಿ ಮುಂಡ್ಸಾಲು, ಕಳವಾಡಿ ಮಂಜು ಪೂಜಾರಿ ಸಸಿಹಿತ್ಲು, ಚುಚ್ಚಿ ಕುಶಲ್ ಶೆಟ್ಟಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಶಿಬಿರಾಧಿಕಾರಿ ಚೇತನ್ ಶೆಟ್ಟಿ ಕೊವಾಡಿ, ಕಾಲೇಜು ಗ್ರಂಥಾಲಯಾಧಿಕಾರಿ ಮಹೇಶ್ ಬಾಬು, ರಾಜೇಶ್ ಶೆಟ್ಟಿ, ಪ್ರವೀಣ್ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

Exit mobile version