Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯಲ್ಲಿ ಗೋ ಭಿಕ್ಷಾ ಯಾತ್ರೆ

ಗಂಗೊಳ್ಳಿ: ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಆಶ್ರಯದಲ್ಲಿ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ, ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗ ಗಂಗೊಳ್ಳಿ, ಭಗತ್ ಸಿಂಗ್ ಅಭಿಮಾನಿಗಳ ಬಳಗ ಗಂಗೊಳ್ಳಿ ಹಾಗೂ ಸ್ವಾಮೀ ವಿವೇಕಾನಂದ ದೇಶಪ್ರೇಮಿ ಬಳಗ ಗಂಗೊಳ್ಳಿ ಇವರ ಸಹಕಾರದೊಂದಿಗೆ ಗಂಗೊಳ್ಳಿಯಲ್ಲಿ ಗೋ ಭಿಕ್ಷಾ ಯಾತ್ರೆ ಜರಗಿತು.

ಗಂಗೊಳ್ಳಿಯ ಪೋರ್ಟ್ ಆಫೀಸಿನ ಬಳಿಯಿಂದ ಆರಂಭಗೊಂಡ ಗೋ ಭಿಕ್ಷಾ ಯಾತ್ರೆಯು ಗಂಗೊಳ್ಳಿ ಶ್ರೀ ರಾಮ ಮಂದಿರದ ಬಳಿ ಸಮಾಪನಗೊಂಡಿತು. ಮನುಷ್ಯನ ಬದುಕಿಗೆ ಆರ್ಥಿಕವಾಗಿ, ಧಾರ್ಮಿಕವಾಗಿ ಹಾಗೂ ಆರೋಗ್ಯದಾಯಕಳಾಗಿರುವ ಗೋಮಾತೆಯ ಸೇವೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಗೋ ರಕ್ಷಣೆಯ ಪವಿತ್ರ ಕಾರ್ಯಕ್ಕೆ ನೆರವಾಗುವ ದೃಷ್ಟಿಯಿಂದ ನಿಧಿಯನ್ನು ಸಂಗ್ರಹಿಸಿ ಗೋಶಾಲೆಗೆ ಹಸ್ತಾಂತರಿಸುವ ಉದ್ದೇಶದಿಂದ ಗಂಗೊಳ್ಳಿಯಲ್ಲಿ ಗೋ ಭಿಕ್ಷಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆ ಮೂಲಕ ಸಂಗ್ರಹಗೊಂಡಿರುವ ಹಣವನ್ನು ಗೋಪಾಡಿ ಹೂವಿನಕೆರೆಯಲ್ಲಿರುವ ಕಾಮಧೇನು ಗೋ ಸಂರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಸಂಘಟನೆಗಳ ಪ್ರಮುಖರಾದ ರಾಘವೇಂದ್ರ ಗಾಣಿಗ, ನವೀನ ಪಿ., ವಿಶ್ವನಾಥ ಖಾರ್ವಿ, ರಾಜ ಖಾರ್ವಿ, ಮಹೇಶ ಖಾರ್ವಿ, ಯಶವಂತ ಖಾರ್ವಿ, ಗುರುರಾಜ ಖಾರ್ವಿ, ನವೀನ ಖಾರ್ವಿ ಮೊದಲಾದವರು ಯಾತ್ರೆಯ ನೇತೃತ್ವ ವಹಿಸಿದ್ದರು.

Exit mobile version