Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸಾಕುನಾಯಿ, ಬೀದಿ ನಾಯಿಗಳಿಗೆ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಗಂಗೊಳ್ಳಿ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಸಹಯೋಗದೊಂದಿಗೆ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕುನಾಯಿ ಹಾಗೂ ಬೀದಿ ನಾಯಿಗಳಿಗೆ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ ಸೋಮವಾರ ನಡೆಯಿತು.

ಪಂಚಾಯತ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಸಿಕಾ ಶಿಬಿರಕ್ಕೆ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಚಾಲನೆ ನೀಡಿ, ಮಾತನಾಡಿ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಗಂಗೊಳ್ಳಿ ಇಲ್ಲಿನ ವೈದ್ಯಾಧಿಕಾರಿ ಡಾ. ಅರುಣ್ ಕೆ.ಪಿ., ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗ ಬಂದರೆ ಮನುಷ್ಯರಿಗೂ ಅದರಿಂದ ಅಪಾಯವಿದೆ. ಆದ್ದರಿಂದ ಸಾಕು ನಾಯಿ, ಬೆಕ್ಕುಗಳಿಗೆ ಮತ್ತು ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಬೇಕು ಎಂದರು.

ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ, ಗ್ರಾಪಂ. ಉಪಾಧ್ಯಕ್ಷ ತಬ್ರೇಜ್, ಪಿಡಿಒ ರವಿ, ಕಾರ್ಯದರ್ಶಿ ಅನೂಪ್ ಶೇಟ್, ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿಗಳು, ಪಶು ಸಖಿಯರಾದ ಶೋಭಾ ಮತ್ತು ಸುಜಾತಾ, ಚಿಕಿತ್ಸಾಲಯದ ಸಿಬಂದಿಗಳಾದ ಅಮಿತಾ, ಶಿಲ್ಪಾ, ರಾಘವೇಂದ್ರ, ಮತ್ತಿತರರು ಉಪಸ್ಥಿತರಿದ್ದರು.

ಗ್ರಾ.ಪಂ. ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಎದುರುಗಡೆ, ಮೇಲ್‌ಗಂಗೊಳ್ಳಿ ಅಂಗನವಾಡಿ, ಖಾರ್ವಿಕೇರಿ ಅಂಗನವಾಡಿ, ದಾಕುಹಿತ್ಲು ಅಂಗನವಾಡಿ, ಬಂದರು ಅಂಗನವಾಡಿ, ಮ್ಯಾಂಗನೀಸ್ ರಸ್ತೆ ಅಂಗನವಾಡಿ, ಮಲ್ಯರಬೆಟ್ಟು ಅಂಗನವಾಡಿ, ಗುಡ್ಡೆಕೇರಿ ಅಂಗನವಾಡಿ ವಠಾರಗಳಲ್ಲಿ ಶಿಬಿರ ನಡೆಯಿತು.

Exit mobile version