Site icon Kundapra.com ಕುಂದಾಪ್ರ ಡಾಟ್ ಕಾಂ

ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌: 10 ಚಿನ್ನದ ಪದಕಗಳೊಂದಿಗೆ ವೈಯಕ್ತಿಕ ಹಾಗೂ ಸಮಗ್ರ ಚಾಂಪಿಯನ್‌ಶಿಪ್‌

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕಂಬದಕೋಣೆ ಹೋಬಳಿ ಮಟ್ಟದ ಅಥ್ಲೆಟಿಕ್ ಪಂದ್ಯಾಟದಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳು 10 ಚಿನ್ನದ ಪದಕ, 4 ಬೆಳ್ಳಿಯ ಪದಕ ಮತ್ತು 4 ಕಂಚಿನ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪ್ರೀತಮ್ (8ನೇ ತರಗತಿ) 3 ಚಿನ್ನದ ಪದಕ, ರಜತ್ ಆರ್‌ಪಿ (8ನೇ ತರಗತಿ) 2ಚಿನ್ನ ಮತ್ತು 1ಬೆಳ್ಳಿಯ ಪದಕ, ಅಬ್ದುಲ್ ಶೈಹನ್ (8ನೇ ತರಗತಿ) 2ಚಿನ್ನ ಮತ್ತು 1ಬೆಳ್ಳಿ, ಮನ್ವಿತ್ ( 8ನೇ ತರಗತಿ) 1 ಚಿನ್ನ, ರಜತ್ ಎಲ್‌ಪಿ (8ನೇ ತರಗತಿ) 1 ಚಿನ್ನ, ಬೆಳ್ಳಿ ಮತ್ತು ಕಂಚು, ಅಪೇಕ್ಷಾ (8ನೇ ತರಗತಿ) 1 ಚಿನ್ನ ಮತ್ತು ಕಂಚು, ಚಾರ್ವಿ (7ನೇ ತರಗತಿ) 1 ಬೆಳ್ಳಿ , ಪ್ರೀತಮ್ ಆರ್ (8ನೇ ತರಗತಿ) ಕಂಚಿನ ಪದಕಗಳನ್ನು ಪಡೆದಿರುತ್ತಾರೆ.

14ರ ವಯೋಮಾನದ ಹುಡುಗರ ವಿಭಾಗದಲ್ಲಿ ಅಬ್ದುಲ್ ಶೈಹನ್ ವೈಯಕ್ತಿಕ ಚಾಂಪಿಯನ್ ಹಾಗೂ ಸಮಗ್ರ ಚಾಂಪಿಯನ್ ಆಗಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪಡೆದುಕೊಂಡಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ/ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Exit mobile version